ಇದು ವಿಶ್ವದ ಅತ್ಯಂತ ದುಬಾರಿ ಮೀನು: ಇದರ ಬೆಲೆಗೆ ನೀವು ಬಂಗಲೆ, ಕಾರನ್ನೇ ಖರೀದಿಸಬಹುದು..!
ಡ್ರ್ಯಾಗನ್ ಮೀನು ವಿಶ್ವದ ಅತ್ಯಂತ ದುಬಾರಿ ಮೀನು ಎನಿಸಿಕೊಂಡಿದೆ. ಇದನ್ನು ಏಷ್ಯನ್ ಆರೋವಾನಾ(Asian Arowana) ಎಂದೂ ಕರೆಯುತ್ತಾರೆ. ಈ ಮೀನಿನ ಬೆಲೆ 2 ರಿಂದ 3 ಕೋಟಿ ರೂ. ಆಗುತ್ತದಂತೆ.
ಅನೇಕರು ಈ ಮೀನನ್ನು ಖರೀದಿಸಲು ಮಾತ್ರವಲ್ಲ ಅದನ್ನು ರಕ್ಷಿಸಲು ಕೂಡ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇದರ ಮಾಲೀಕರು ಅತ್ಯಂತ ಜತನದಿಂದ ಈ ಮೀನು ರಕ್ಷಣೆ ಮಾಡುತ್ತಾರಂತೆ. ಇದಕ್ಕಾಗಿಯೇ ವಿಶೇಷ ಭದ್ರತಾ ವ್ಯವಸ್ಥೆ ಮಾಡಿ ಕಾವಲುಗಾರರನ್ನೂ ಕೂಡ ನೇಮಿಸಲಾಗುತ್ತದಂತೆ.
ಈ ಮೀನಿನ ಬೆಲೆ ಕೇಳಿದರೆ ನೀವು ಹೌಹಾರುವುದು ಗ್ಯಾರೆಂಟಿ. ಈ ಮೀನಿನ ಬೆಲೆಯಲ್ಲಿ ನೀವು ಐಷಾರಾಮಿ ಕಾರು, ಬಂಗಲೆ ಮತ್ತು ಹಲವು ಕೆಜಿಗಳಷ್ಟು ಚಿನ್ನವನ್ನೇ ಖರೀದಿ ಮಾಡಬಹುದು. ಆದರೂ ಈ ಮೀನಿಗೆ ಕೋಟಿ ಕೋಟಿ ಬೆಲೆ ಏಕೆ ಇದೆ ಎಂದು ಎಲ್ಲರೂ ಕೇಳಬಹುದು. ಏಶಿಯನ್ ಅರೋವಾನಾ ಮೀನು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಇದನ್ನು ಚೀನಾದಲ್ಲಿ ಸ್ಥಿತಿಗತಿಯ ಸಂಕೇತವಾಗಿಯೂ ಪರಿಗಣಿಸಲಾಗಿದೆ.
ಒಂದು ವರದಿಯ ಪ್ರಕಾರ ಚೀನಾದ ಜನರು ಈ ಮೀನಿಗೆ ದುಬಾರಿ ಬೆಲೆ ನೀಡಲು ಸಿದ್ಧರಾಗಿದ್ದಾರೆ. ಈ ಮೀನಿನ ಮೇಲೆ ‘The Dragon Behind the Glass’ ಎಂಬ ಪುಸ್ತಕವನ್ನೂ ಬರೆಯಲಾಗಿದೆ. ಈ ಪುಸ್ತಕದಲ್ಲಿಯೇ ಈ ಮೀನಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ.
ಅರೋವಾನಾ ಒಂದು ಸಾಮಾನ್ಯ ಸಾಕು ಮೀನು ಅಲ್ಲ. ಇದು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ ಮತ್ತು ಇದು 3 ಅಡಿ ಉದ್ದವಿರುತ್ತದೆ. ಇದರ ಬೆಲೆ ತುಂಬಾ ಹೆಚ್ಚಾಗಿದ್ದು, ಇದರಿಂದಾಗಿ ಈ ಮೀನಿನ ವಿಷಯದಲ್ಲಿ ಅಪರಾಧವೂ ಹೆಚ್ಚಾಗಿದೆ.