ಇದುವೇ ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲು!; ₹30 ಲಕ್ಷ ಬೆಲೆ ಬಾಳುವ ಇದರ ವಿಶೇಷತೆ ಏನು ಗೊತ್ತಾ?
ನೀವು ಎಂದಾದರೂ ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲಿನ ಬಗ್ಗೆ ಕೇಳಿದ್ದೀರಾ? ಈ ವಿಶೇಷ ಹಲ್ಲು ಬರೋಬ್ಬರೀ 30 ಲಕ್ಷ ರೂ. ಬೆಲೆಗೆ ಮಾರಾಟವಾಗಿದೆ. ಸದ್ಯ ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದು ಯಾರ ಹಲ್ಲು..? ಇದಕ್ಕೆ ಏಕೆ ಇಷ್ಟೊಂದು ಬೆಲೆ..? ಇದೆಲ್ಲದರ ಮಾಹಿತಿ ಇಲ್ಲಿದೆ ನೋಡಿ...
ಜಗತ್ತಿನ ಶ್ರೇಷ್ಠ ವಿಜ್ಞಾನಿ ಯಾರು ಅಂತಾ ಕೇಳಿದ್ರೆ ತಟ್ಟನೇ ಸರ್ ಐಸಾಕ್ ನ್ಯೂಟನ್ ಅವರ ಹೆಸರು ನೆನಪಿಗೆ ಬರುತ್ತದೆ. ಇವರ ಆ್ಯಪಲ್ ಅಂದರೆ ಸೇಬಿನ ಕಥೆಯನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಒಂದೇ ಒಂದು ಸೇಬು ಮರದಿಂದ ಬಿದ್ದಿದ್ದನ್ನು ಕಂಡು ಭೂಮಿಯ ಗುರುತ್ವಾಕಷ೯ಣ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಅನ್ನೋದರ ಬಗ್ಗೆ ಈ ವಿಜ್ಞಾನಿ ಜಗತ್ತಿಗೆ ತಿಳಿಸಿದರು.
ಸರ್ ಐಸಾಕ್ ನ್ಯೂಟನ್ ಅವರು 1726ರಲ್ಲಿ ನಿಧನರಾದರು. 1816ರಲ್ಲಿ ನ್ಯೂಟನ್ ಅವರ ಹಲ್ಲುಗಳಲ್ಲಿ ಒಂದನ್ನು ಲಂಡನ್‌ನಲ್ಲಿ 3,633 ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಲಾಯಿತು. ಇದು ಇಂದು 35,700 ಅಮೆರಿಕನ್ ಡಾಲರ್‌ಗೆ (ಅಂದಾಜು 30 ಲಕ್ಷ ರೂ.) ಸಮನಾಗಿದೆ.
ಐಸಾಕ್ ನ್ಯೂಟನ್ ಅವರ ಈ ಹಲ್ಲು ಇದುವರೆಗೆ ಮಾರಾಟವಾದ ʼಅತ್ಯಂತ ದುಬಾರಿ ಹಲ್ಲುʼ ಎಂಬ ಗಿನ್ನೆಸ್ ವಿಶ್ವ ದಾಖಲೆಗಳಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿದೆ. ಈ ಹಲ್ಲನ್ನು ಉಂಗುರದ ಮೇಲೆ ಮುತ್ತಿನಂತೆ ಇರಿಸಲಾಗಿದೆ. ಇದರ ಫೋಟೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.