ಇದು ವಿಶ್ವದ ಅತ್ಯಂತ ಶ್ರೀಮಂತ ಗ್ರಾಮ: ಇಲ್ಲಿನ ಪ್ರತಿಯೊಬ್ಬ ವ್ಯಕ್ತಿ ಕೃಷಿಯಿಂದ ವಾರ್ಷಿಕ 80 ಲಕ್ಷ ರೂ. ಗಳಿಸುತ್ತಾರೆ!

Sat, 04 Jun 2022-2:36 pm,

ಇಂದು ನಾವು ನಿಮಗೆ ಅನೇಕ ನಗರಗಳಿಗೆ ಸ್ಪರ್ಧೆಯನ್ನು ಒಡ್ಡಿರುವ ಶ್ರೀಮಂತ ಹಳ್ಳಿಯ ಬಗ್ಗೆ ಹೇಳಲಿದ್ದೇವೆ. ಇಲ್ಲಿ ವಾಸಿಸುವ ಎಲ್ಲರೂ ಕೋಟ್ಯಾಧಿಪತಿಗಳು. ಇದನ್ನು ವಿಶ್ವದ ಅತ್ಯಂತ ಶ್ರೀಮಂತ ಗ್ರಾಮ ಎಂದು ಕರೆಯಲಾಗುತ್ತದೆ.

ಹುವಾಜಿ ಎಂಬ ಹೆಸರಿನ ಹಳ್ಳಿಯು ಚೀನಾದ ಜಿಯಾಂಗ್ಯಿನ್ ನಗರದ ಸಮೀಪದಲ್ಲಿದೆ. ಇದೊಂದು ಕೃಷಿ ಪ್ರಧಾನ ಗ್ರಾಮ. ಇಲ್ಲಿನ ಬಹುತೇಕ ಜನರು ಕೃಷಿ ಮಾಡುತ್ತಾರೆ. ಹುವಾಜಿ ಗ್ರಾಮದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ವಾರ್ಷಿಕ ಆದಾಯ 80 ಲಕ್ಷ ರೂ. ಇದೆ.

ಈ ಗ್ರಾಮದಲ್ಲಿ ಪ್ರತಿಯೊಬ್ಬರೂ ಐಷಾರಾಮಿ ಮನೆಯನ್ನು ನಿರ್ಮಿಸಿದ್ದಾರೆ. ಈ ಮನೆಗಳಲ್ಲಿ ಐಷಾರಾಮಿಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಇವೆ. ಮನೆಗಳ ಒಳಗೆ ಐಷಾರಾಮಿ ಕಾರುಗಳು ಸಹ ಇವೆ. ಇಲ್ಲಿ ನಿರ್ಮಿಸಲಾದ ರಸ್ತೆಗಳು ಮತ್ತು ಚರಂಡಿಗಳು ನಗರಗಳನ್ನೇ ಮೀರಿಸುವಂತಿವೆ.  

ಈ ಗ್ರಾಮವು 1961ರಲ್ಲಿ ನೆಲೆಗೊಂಡಿತು. ಆಗ ತುಂಬಾ ಬಡವಾಗಿತ್ತು. ಗ್ರಾಮ ನೆಲೆಸಿದ ಸುಮಾರು 1 ವರ್ಷದ ನಂತರ ಇಲ್ಲಿ ಕಮ್ಯುನಿಸ್ಟ್ ಪಕ್ಷದ ಸಂಘಟನೆ ರೂಪುಗೊಂಡಿತು. ಅದರ ಅಧ್ಯಕ್ಷ ವೂ ರೆನ್ವಾವೊ ಹಳ್ಳಿಗರಿಗೆ ಇಂತಹ ಪರಿಕಲ್ಪನೆಯನ್ನು ನೀಡಿದರು. ಬಳಿಕ ಹಳ್ಳಿಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿಹೋಯಿತು.   

ವೈಯಕ್ತಿಕ ಕೃಷಿ ಮಾಡುವ ಬದಲು ಗುಂಪು ಕೃಷಿ ಮಾಡುವಂತೆ ವೂ ರೆನ್ವಾವೊ  ಇಲ್ಲಿನ ಗ್ರಾಮಸ್ಥರಿಗೆ ತಿಳಿಸಿದ್ದರು. ಇಲ್ಲಿನ ಪ್ರತಿಯೊಬ್ಬರ ಜನರು ಅವರ ಮಾತನ್ನು ಪಾಲಿಸಿದರು ಮತ್ತು ಸಾಮೂಹಿಕ ಕೃಷಿಯನ್ನು ಪ್ರಾರಂಭಿಸಿದರು. ಅದರ ನಂತರ ಎಲ್ಲವೂ ಬದಲಾಗಲಾರಂಭಿಸಿತು ಮತ್ತು ಇಂದು ಇಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಮಿಲಿಯನೇರ್ ಆಗಿದ್ದಾನೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link