Chenab Bridge : ಭಾರತದಲ್ಲಿ ನಿರ್ಮಾಣವಾಗುತ್ತಿದೆ `ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ`! ಎಷ್ಟು ಎತ್ತರ ಗೊತ್ತಾ?

Wed, 09 Feb 2022-2:24 pm,

ಚೆನಾಬ್ ಸೇತುವೆಯ ನಿರ್ಮಾಣವು 2004 ರಲ್ಲಿ ಪ್ರಾರಂಭ : ಮಾರ್ಚ್ 2021 ರಲ್ಲಿ, ಆಗಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೇತುವೆಯ ಕಮಾನು ಕೆಳಭಾಗವನ್ನು ಪೂರ್ಣಗೊಳಿಸಿದಾಗ ವೀಡಿಯೊವನ್ನು ಹಂಚಿಕೊಂಡಿದ್ದರು. ಸೆಲ್ಫ್ ಸುಪ್ಪೋರ್ಟಿನ್ಗ್ ಆರ್ಚ್ ಇವಾಗಿವೆ. ಅತ್ಯುತ್ತಮವಾಗಿ ನುರಿತ ಎಂಜಿನಿಯರ್ ಗಳನ್ನೂ ಬಳಸಿಕೊಂಡು ನಿರ್ಮಿಸಲಾಗುತ್ತಿದೆ.

(ಚಿತ್ರ ಮೂಲ: Twitter@railminindia)

1,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಚೆನಾಬ್ ಸೇತುವೆ : ಚೆನಾಬ್ ಸೇತುವೆಯು ನದಿಯ ತಳ ಮಟ್ಟದಿಂದ 359 ಮೀಟರ್‌ಗಳಷ್ಟು ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1,250 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ.

(ಚಿತ್ರ ಮೂಲ: Twitter@railminindia)

ಕಾಶ್ಮೀರ ಕಣಿವೆಗೆ ನೇರ ಸಂಪರ್ಕ ಒದಗಿಸಲಿದೆ ಚೆನಾಬ್ ಸೇತುವೆ : ಕಾಶ್ಮೀರ ಕಣಿವೆಗೆ ನೇರ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ಚೆನಾಬ್ ಸೇತುವೆಯ ನಿರ್ಮಾಣ ಕಾರ್ಯವು 2004 ರಲ್ಲಿ ಆರಂಭವಾಗಿದೆ. ಈ ಸೇತುವೆಯ ಒಟ್ಟು ತೂಕ 10619 ಮೆಟ್ರಿಕ್ ಟನ್. ಇದರ ಭಾಗಗಳನ್ನು ಭಾರತೀಯ ರೈಲ್ವೇ ಮೊದಲ ಬಾರಿಗೆ ಕೇಬಲ್ ಕ್ರೇನ್ ಮೂಲಕ ನಿರ್ಮಿಸಲಾಗಿದೆ.

(ಚಿತ್ರ ಮೂಲ: Twitter@railminindia)

ಚೆನಾಬ್ ಸೇತುವೆಯನ್ನು 1.3-ಕಿಮೀ ಉದ್ದದ ಚೆನಾಬ್ ನದಿಯ ಮೇಲೆ ನಿರ್ಮಿಸಲಾಗಿದೆ : ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್) ಯೋಜನೆಯಡಿಯಲ್ಲಿ ಕತ್ರಾ ಮತ್ತು ಬನಿಹಾಲ್ ನಡುವಿನ 111-ಕಿಮೀ ವ್ಯಾಪ್ತಿಯಲ್ಲಿ ಚೆನಾಬ್ ಸೇತುವೆಯು ನಿರ್ಮಾಣವಾಗುತ್ತಿದೆ. ಭಾರತೀಯ ರೈಲ್ವೇ ಚೆನಾಬ್ ನದಿಯ ಮೇಲೆ ಈ ಸೇತುವೆಯನ್ನು ನಿರ್ಮಿಸಿದೆ, ಇದು 1.3-ಕಿಮೀ ಉದ್ದ ಮತ್ತು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿದೆ.

(ಚಿತ್ರ ಮೂಲ: Twitter@railminindia)

ವಿಶ್ವದ ಅತಿ ಎತ್ತರದ ಸೇತುವೆ ಚೆನಾಬ್ ಸೇತುವೆ : ಮೋಡಗಳ ಮೇಲಿನ ವಿಶ್ವದ ಅತಿ ಎತ್ತರದ ಸೇತುವೆಗೆ  ಚೆನಾಬ್ ಬ್ರಿಜ್ ಎಂದು ಕರೆಯಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಚೆನಾಬ್ ಸೇತುವೆಯು 1315 ಮೀಟರ್ ಉದ್ದವಾಗಿದೆ ಮತ್ತು ನದಿಯ ತಳ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ಹೀಗಾಗಿ ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ. ಇದು ಫ್ರಾನ್ಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ.

(ಚಿತ್ರ ಮೂಲ: Twitter@AshwiniVaishnaw)

ZEENEWS TRENDING STORIES

By continuing to use the site, you agree to the use of cookies. You can find out more by Tapping this link