ಏರಿಳಿತವಾಗುವ ಬ್ಲಡ್ ಶುಗರ್ ಜೊತೆಗೆ ಈ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿಯಿರುವ ಎಲೆಯಿದು
ರಕ್ತದಲ್ಲಿನ ಸಕ್ಕರೆಯ ಏರಿಳಿತ ಆರೋಗ್ಯಕ್ಕೆ ಹಾನಿಕಾರಕ. ಪೇರಳೆ ಎಲೆಗಳನ್ನು ಬಳಸಿ ಇದನ್ನು ನಿಯಂತ್ರಿಸಬಹುದು. ಹೌದು, ಪೇರಳೆ ಎಲೆಗಳು ಆಲ್ಫಾ-ಗ್ಲುಕೋಸಿಡೇಸ್ ಕಿಣ್ವವನ್ನು ಹೊಂದಿರುತ್ತವೆ. ಇದು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು, 3 ತಿಂಗಳ ಕಾಲ ಪ್ರತಿದಿನ ಅದರ ಎಲೆಗಳ ಚಹಾವನ್ನು ಕುಡಿಯಬೇಕು.
ನಾವು ಸೇವಿಸುವ ಆಹಾರಗಳಲ್ಲಿ ಇರುವ ಪಿಷ್ಟವು ಸಕ್ಕರೆಯಾಗಿ ಬದಲಾಗಲು ಪ್ರಾರಂಭಿಸಿದಾಗ ತೂಕ ಹೆಚ್ಚಾಗುತ್ತದೆ. ಪೇರಳೆ ಎಲೆಗಳು ಈ ಪ್ರಕ್ರಿಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅದು ತೂಕವನ್ನು ಕಳೆದುಕೊಳ್ಳಲು ಸಹಾಯವಾಗುತ್ತದೆ. ಪೇರಳೆ ಎಲೆಗಳಲ್ಲಿ ಕಾರ್ಬೋಹೈಡ್ರೇಟ್ ಅಂಶವು ತುಂಬಾ ಕಡಿಮೆಯಾಗಿರುತ್ತದೆ . ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೇರಳೆ ಎಲೆಗಳು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿ. ಅತಿಸಾರದಿಂದ ಬಳಲುತ್ತಿದ್ದರೆ, ಪೇರಳೆ ಎಲೆಗಳು ಅದನ್ನಿ ನಿವಾರಿಸುತ್ತದೆ. ಅರ್ಧ ಕಪ್ ಅಕ್ಕಿ ಹಿಟ್ಟನ್ನು ಎಲೆಗಳೊಂದಿಗೆ ಒಂದು ಲೋಟ ನೀರಿನಲ್ಲಿ ಕುದಿಸಿ ಮತ್ತು ದಿನಕ್ಕೆ ಎರಡು ಬಾರಿ ಈ ಪಾನೀಯವನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಅತಿಸಾರದ ಸಮಸ್ಯೆಯಿಂದ ಶೀಘ್ರವೇ ಪರಿಹಾರ ಸಿಗುತ್ತದೆ.
ವ್ಯಾಯಾಮ ಮಾಡದಿರುವುದು ಮತ್ತು ಕರಿದ ಆಹಾರವನ್ನು ತಿನ್ನುವುದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೀವು ಪೇರಳೆ ಎಲೆಗಳ ಚಹಾವನ್ನು ಕುಡಿಯಬಹುದು. ಪೇಳೆ ಎಲೆಯ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಎಲ್‌ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.