3ನೇ ODI ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಲೆಜೆಂಡ್: ಟೀಂ ಇಂಡಿಯಾಗೆ ಇವರ ಉಪಸ್ಥಿತಿಯೇ ದೊಡ್ಡ ಬಲ!

Tue, 21 Mar 2023-5:26 pm,

ಚೆನ್ನೈನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ ಭಾರತದ ಪರಿಸ್ಥಿತಿ. ಈ ಪಂದ್ಯ ಭಾರತಕ್ಕೆ ಸರಣಿ ಗೆಲ್ಲಲು ಮಾತ್ರವಲ್ಲ, ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತದ ನಂಬರ್ ಒನ್ ಸ್ಥಾನವನ್ನೂ ಕಾಪಾಡಿಕೊಳ್ಳಲು ಬಹುಮುಖ್ಯವಾಗಿದೆ.

ಈ ಕ್ರೀಡಾಂಗಣದಲ್ಲಿ ಭಾರತದ ದಾಖಲೆ ವಿಶೇಷವೇನಿಲ್ಲ. ಕಳೆದ 6 ವರ್ಷಗಳಿಂದ ಟೀಂ ಇಂಡಿಯಾ ಇದೇ ಮೈದಾನದಲ್ಲಿ ಗೆಲುವಿಗಾಗಿ ಹಾತೊರೆಯುತ್ತಿದೆ. ಇಲ್ಲಿ ಭಾರತ 2019 ರಲ್ಲಿ ಕೊನೆಯ ODI ಆಡಿತ್ತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತವನ್ನು 8 ವಿಕೆಟ್‌’ಗಳಿಂದ ಸೋಲಿಸಿತು.

ಮಹೇಂದ್ರ ಸಿಂಗ್ ಧೋನಿ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಧೋನಿ ಒಟ್ಟು 6 ಪಂದ್ಯಗಳಲ್ಲಿ 401 ರನ್ ಗಳಿಸಿದ್ದಾರೆ. ಇದರ ನಂತರ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಚೆಪಾಕ್‌ನಲ್ಲಿ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಕೊಹ್ಲಿ 283 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 2 ಅರ್ಧ ಶತಕಗಳೂ ಸೇರಿವೆ.

ಮೂರನೇ ಏಕದಿನ ಪಂದ್ಯದ ವೇಳೆ ಮಾಜಿ ನಾಯಕ ಎಂಎಸ್ ಧೋನಿ ಚೆಪಾಕ್ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದು ಪಂದ್ಯಕ್ಕೆ ಸಾಕ್ಷಿಯಾಗುತ್ತಿರುವುದು ಟೀಂ ಇಂಡಿಯಾ ಹಾಗೂ ಅಭಿಮಾನಿಗಳಿಗೆ ಸಂತಸದ ವಿಚಾರ. ಇದಕ್ಕೂ ಮೊದಲು, ಧೋನಿ ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಸಹ ಭೇಟಿಯಾಗಲಿದ್ದಾರೆ.

ಒಂದೆಡೆ ಭಾರತ ತಂಡ ಈ ಸರಣಿಯಲ್ಲಿ 2-1 ಅಂತರದಲ್ಲಿ ಗೆಲ್ಲಲು ಬಯಸುತ್ತಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಕೂಡ ಈ ಸರಣಿ ಗೆಲ್ಲುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ. ಇಲ್ಲಿನ ಪಿಚ್ ಬ್ಯಾಟಿಂಗ್‌’ಗೆ ಉತ್ತಮವಾಗಿದೆ. ಸದ್ಯ ಎರಡೂ ತಂಡಗಳು ಸರಣಿಯಲ್ಲಿ 1-1 ಸಮಬಲದಲ್ಲಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link