ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಗಳಿಕೆ ಮಾಡ್ತಾಳೆ ಈ `ಲೋನ್ಲಿ ಮ್ಯಾನ್ಸ್ ಗರ್ಲ್ ಫ್ರೆಂಡ್`!
ಇಂದಿನ ವಿದ್ಯಾವಂತ ಸ್ಮಾರ್ಟ್ ಮಹಿಳೆಯರ ವೃತ್ತಿ ಎಂದರೆ, ಇಂಜಿನಿಯರ್, ಡಾಕ್ಟರ್, ಟೀಚರ್, ಪೊಲೀಸ್, ಲಾಯರ್, ಸಿಎ, ಕಮ್ಯುನಿಟಿ ಹೆಲ್ಪರ್ ಮತ್ತು ಬ್ಯುಸಿನೆಸ್ ವುಮೆನ್ ಎಂದು ಕೆಲವರು ಹೇಳಿದರೆ. ಈ ಮೇಡಂ ಪಾಲಿಗೆ ಆ ಸಂಗತಿಯೇ ಬೇರೆ ಆಗಿದೆ. ಅಮೆರಿಕದ (USA) ಈ ಸುಂದರಿ ಓರ್ವ ವೃತ್ತಿಪರ ಗೆಳತಿ ಅಂದರೆ ಪ್ರೊಫೆಶ್ನಲ್ ಗರ್ಲ್ ಫ್ರೆಂಡ್ ಆಗಿದ್ದಾಳೆ.
ಈ ಸೂಪರ್ ಮಾಡೆಲ್ ಮತ್ತು ಮಾಜಿ ಸ್ಟ್ರಿಪ್ಪರ್ ಪ್ರಸ್ತುತ ಭಾರಿ ಚರ್ಚೆಯಲ್ಲಿದ್ದಾಳೆ. ಏಕೆಂದರೆ ಹಣ ಗಳಿಕೆಗೆ ಆಕೆ ಕಂಡುಕೊಂಡ ವಿಚಿತ್ರ ವಿಧಾನ. ಬಹುಕಾಲದಿಂದ ಅಡಲ್ಟ್ ಇಂಡಸ್ಟ್ರಿಯಲ್ಲಿ ದುಡಿಯುತ್ತಿರುವ ಈ ಮಹಿಳೆಯ ಗಳಿಕೆಯ ರಹಸ್ಯ ಕಥೆಗಳು ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿವೆ.
ಅತಿ ಶ್ರೀಮಂತಿಕೆ ಸಂಪಾದಿಸಿದ ಈ ಮಾಡೆಲ್ ಹೆಸರು ಜೆನ್ನಾ ಮ್ಯಾಡಿಸನ್. 30 ವರ್ಷ ವಯಸ್ಸಿನ ಚಿಕಾಗೋ ಮೂಲದ ಈ ಮಾಡೆಲ್ ದಿನವೊಂದಕ್ಕೆ 1 ಲಕ್ಷ ರೂ.ಗಳನ್ನು ಅತ್ಯಂತ ಸುಲಭವಾಗಿ ಗಳಿಸುತ್ತಾಳೆ. ಹಣ ಪಡೆದು ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಓರ್ವ ವೃತ್ತಿಪರ ಗೆಳತಿಯಾಗಿದ್ದಾಳೆ.
ಮಾಧ್ಯಮ ವರದಿಗಳ ಪ್ರಕಾರ, ಒಂಟಿ ಪುರುಷರಿಗೆ ಗೆಳತಿಯಾಗಿರುವುದು ಮತ್ತು ಅವರಿಂದ ಭಾರಿ ಶುಲ್ಕವನ್ನು ಪಡೆಯುವುದು ಈಕೆಯ ಕಾಯಕ ಮತ್ತು ಆದಾಯದ ಮೂಲ ಎಂದರೆ ತಪ್ಪಾಗಲಾರದು. ಏಕಾಂಗಿ ಪುರುಷರು ಅಂದರೆ ಯಾವುದೇ ಕಾರಣಾಂತರದಿಂದ ಒಂಟಿತನ ಅನುಭವಿಸುತ್ತಿರುವವರು ಹಣ ಕೊಟ್ಟು ಈಕೆಯನ್ನು ಗೆಳತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇವಳು ಅವರೊಂದಿಗೆ ಮಾತನಾಡುತ್ತಾಳೆ, ಅವರ ಸಮಸ್ಯೆಗಳು, ದುಃಖ ಮತ್ತು ನೋವುಗಳನ್ನು ಕೇಳುತ್ತಾಳೆ. ನಗು, ಹಾಸ್ಯ ಮತ್ತು ಪ್ರಣಯ ಅವರೊಂದಿಗೆ ಎಲ್ಲವನ್ನೂ ಮಾಡುತ್ತಾಳೆ, ಆದರೆ ಆಕೆಯ ಈ ಎಲ್ಲಾ ಸೇವೆಗಳು ಆನ್‌ಲೈನ್‌ನಲ್ಲಿ ಮಾತ್ರ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ
ಆನ್‌ಲೈನ್ ಸೇವೆ ಎಂದರೆ ಅವಳು ತನ್ನ ಸೇವೆಗಳನ್ನು ಜನರನ್ನು ಭೇಟಿ ಮಾಡುವ ಮೂಲಕ ನೀಡುವುದಿಲ್ಲ, ಆದರೆ ಫೋನ್ ಮತ್ತು ಸಂದೇಶಗಳ ಮೂಲಕ ತನ್ನ ಪ್ರೇಮಿಗಳೊಂದಿಗೆ ಸಂಪರ್ಕದಲ್ಲಿರುತ್ತಾಳೆ. ಒಂದು ರಫ್ ಅಂದಾಜು ಹಾಗೂ ಬ್ಯಾಂಕ್ ವಿವರಗಳ ಪ್ರಕಾರ, ಈಕೆಗೆ ಸುಮಾರು ಮೂರು ಸಾವಿರ ಬಾಯ್ ಫ್ರೆಂಡ್ ಗಳಿದ್ದಾರೆ.