ಅಬ್ಬಬ್ಬಾ..!ಅಂಬಾನಿಗೆ ಟೋಪಿ ಹಾಕಿದ ಭೂಪ..!

Fri, 15 Jan 2021-1:13 pm,

ಅಂಬಾನಿಗೆ ಟೋಪಿ ಹಾಕಿದ ಕಲ್ಪೇಶ್ ದಫ್ತರಿಯ ಕಂಪನಿ ಸಂಕಲ್ಪ ಕ್ರಿಯೇಶನ್ಸ್ (Sunkkalp Creation)ಗೆ ಸೇರಿದ 4.87 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.  ಇದರಲ್ಲಿ ಮುಂಬಯಿಯಲ್ಲಿರುವ ಒಂದು ಕಮರ್ಶಿಯಲ್ ಕಾಂಪ್ಲೆಕ್ಸ್ (Commercial Complex)ಕೂಡಾ ಸೇರಿದೆ.  ರಾಜ್ ಕೋಟ್ ನಲ್ಲಿರುವ ನಾಲ್ಕು ವಾಣಿಜ್ಯ ಸಂಕೀರ್ಣಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.   

ಸಿಬಿಐ (CBI)  ಮೂಲಕ ದಾಖಲಾಗಿರುವ ಎಫ್ ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು (ED)ಮನಿ ಲಾಂಡರಿಂಗ್ ಕಾಯಿದೆಯನ್ವಯ PMLA ಕೇಸ್ ದಾಖಲಿಸಿ  ತನಿಖೆ ಆರಂಭಿಸಿದೆ.  ಕೆಲವೊಂದು ವ್ಯಕ್ತಿಗಳೊಂದಿಗೆ ಸೇರಿ, ಕಲ್ಪೇಶ್ ದಫ್ತರಿ ವಿಶೇಷ ಕೃಷಿ ಮತ್ತು ಗ್ರಾಮ ಉದ್ಯೋಗ   (VKGUY)  ಯೋಜನೆಯ 13 ಲೈಸೆನ್ಸ್ ಗಳಲ್ಲಿ ಮೋಸ ಮಾಡಿದ್ದಾರೆ ಎಂದು ಇಡಿ ಹೇಳಿದೆ. ಈ ಲೈಸೆನ್ಸಗಳಲ್ಲಿ ಹಿಂದೂ ಸ್ತಾನ್ ಕಾಂಟಿನೆಂಟಲ್ (Hindustan Continental)  ಎಂಬ ಕಂಪನಿಯನ್ನು ಸೃಷ್ಟಿಸಿ ಅದನ್ನು ರಿಲಯನ್ಸ್ (RIL)  ಗೆ ಮಾರಾಟ ಮಾಡಿದ್ದಾನೆ ಎಂದು ಇಡಿ ಆಪಾದಿಸಿದೆ.   

ಈ 13 ಲೈಸೆನ್ಸ್ ಗಳನ್ನು ಮಾರಾಟ ಮಾಡಿದ ದಫ್ತರಿ 6.8 ಕೋಟಿ ಗಳಿಸಿದ್ದಾನೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಮೋಸ ಮುಚ್ಚಿಹಾಕಲು ಆರೋಪಿಗಳು ವಿಶೇಷ ತಂತ್ರಗಾರಿಕೆ ರೂಪಿಸಿದ್ದರು ಎಂದು ಇಡಿ ಹೇಳಿದೆ.  ಈ ಹಗರಣದಲ್ಲಿ ಇತರ ನಾಲ್ವರು ಆರೋಪಿಗಳನ್ನೂ ಗುರುತಿಸಲಾಗಿದೆ.

ನ್ಯೂಸ್ ಏಜೆನ್ಸ್  ANI ಪ್ರಕಾರ ಸಿಬಿಐ ಈಗಾಗಲೇ ಎಫ್ಐಆರ್ ದಾಖಲಿಸಿದೆ  ಎಂದು  ED ಹೇಳಿದೆ. ಐಪಿಸಿ ಸೆಕ್ಷನ್ 420, 467, 468, 471, 477A ಜೊತೆಗೆ ಭ್ರಷ್ಟಾಚಾರ ತಡೆ ಕಾಯ್ದೆ1998ರ ಅನ್ವಯ 13(2) ಮತ್ತು 13(1)(d) ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ. ಇದೀಗ  ಇಡಿ ಪ್ರಕರಣದ ತನಿಖೆ ನಡೆಸುತ್ತಿದೆ.

 

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link