ಸರ್ಜರಿಯ ಅಗತ್ಯವೇ ಇಲ್ಲ!ಕೇವಲ ಐದು ದಿನಗಳಲ್ಲಿ ಕಿಡ್ನಿ ಸ್ಟೋನ್ ಅನ್ನು ದೇಹದಿಂದ ಹೊರ ಹಾಕುತ್ತದೆ ಈ ಮಿರಕಾಲ್ ಎಲೆ !
ಕಿಡ್ನಿ ಸ್ಟೋನ್ ಒಂದು ಗಟ್ಟಿಯಾದ ವಸ್ತುವಾಗಿದೆ.ಮೂತ್ರಪಿಂಡದ ಕಲ್ಲುಗಳಲ್ಲಿ ನಾಲ್ಕು ವಿಧಗಳಿವೆ.ಕ್ಯಾಲ್ಸಿಯಂ ಆಕ್ಸಲೇಟ್,ಯೂರಿಕ್ ಆಮ್ಲ,ಸ್ಟ್ರುವೈಟ್ ಮತ್ತು ಸಿಸ್ಟೈನ್.
ಕಿಡ್ನಿ ಸ್ಟೋನ್ ಗಾತ್ರ ದೊಡ್ಡದಾದಂತೆ ಅದನ್ನು ಹೊರ ತೆಗೆಯಲು ಶಸ್ತ್ರ ಚಿಕಿತ್ಸೆ ಮಾಡಿಸುವ ಸಲಹೆ ನೀಡಲಾಗುತ್ತದೆ.ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆಗೆ ಒಂದು ರೀತಿಯ ವಿಶೇಷ ಎಲೆಗಳನ್ನು ಬಳಸಬಹುದು.
ಈ ಎಲೆ ಕಿಡ್ನಿ ಸ್ಟೋನ್ ಇದ್ದವರಿಗೆ ಸಂಜೀವಿನಿ ಎಂದು ಕರೆಯಲಾಗುತ್ತದೆ.ಅದರ ಸಾಮರ್ಥ್ಯದಿಂದಾಗಿ ಇದನ್ನು "ಸ್ಟೋನ್ ಬ್ರೇಕರ್"ಎಂದೇ ಕರೆಯಲಾಗುತ್ತದೆ.
ಈ ಎಲೆ ಕ್ಷಾರೀಯ ಗುಣಗಳನ್ನು ಹೊಂದಿದೆ.ಇದು ಪಿತ್ತಕೋಶ ಮತ್ತು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯುತ್ತದೆ.ಮೂತ್ರಪಿಂಡದ ಕಲ್ಲುಗಳನ್ನು ಪುಡಿ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ.
ಈ ಎಲೆಯನ್ನು ಕಾಡು ಬಸಳೆ, ಪತ್ರ ಜೀವ, ಗಂಡು ಕಾಳಿಂಗ, ಅಸ್ತಿ ಬಕ್ಷ, ಪರ್ಣ ಬೀಜ ಎಂದೆಲ್ಲಾ ಕರೆಯಲಾಗುತ್ತದೆ.
ಈ ಎಲೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ.ಈ ನೀರು ತಣ್ಣಗಾದ ಮೇಲೆ ಕುಡಿಯಿರಿ.ಇದನ್ನು ನಿಯಮಿತವಾಗಿ ಸೇವಿಸಿದರೆ ಕಿಡ್ನಿ ಸ್ಟೋನ್ ಕರಗುತ್ತಾ ಬರುವುದು. ಐದು ದಿನಗಳಲ್ಲಿ ಪೂರ್ತಿ ಕಲ್ಲು ಕರಗಿ ನೀರಾಗುವುದು.
ಈ ಎಲೆಯನ್ನು ಒಣಗಿಸಿ, ಪುಡಿ ಮಾಡಿ ಇದನ್ನು ಒಣ ಶುಂಠಿ ಜೊತೆ ಬೆರೆಸಿ ಬಿಸಿನೀರಿನೊಂದಿಗೆ ಕುಡಿಯಬೇಕು.ಇದು ಕಿಡ್ನಿ ಸ್ಟೋನ್ ನೋವನ್ನು ತಕ್ಷಣ ಕಡಿಮೆ ಮಾಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.