ಬಿಳಿ ಕೂದಲನ್ನು ಕ್ಷಣಾರ್ಧದಲ್ಲೇ ಕಪ್ಪಾಗಿಸುತ್ತೆ ಈ ನ್ಯಾಚುರಲ್ ಹೇರ್ ಪ್ಯಾಕ್..!!
ಕೂದಲಿಗೆ ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆ ಕುಂಠಿತಗೊಳ್ಳಬಹುದು.. ಹಾಗಾಗಿ ಇಂತಹ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಉತ್ತಮ..
ಆನುವಂಶಿಕತೆ, ವಿಟಮಿನ್ ಕೊರತೆ, ಮಾನಸಿಕ ಒತ್ತಡ, ಪೌಷ್ಟಿಕಾಂಶಗಳ ಕೊರತೆ ಹೀಗೆ ಹತ್ತು ಹಲವಾರು ಕಾರಣಗಳಿಂದ ಕೂದಲು ಉದುರುವುದು ಹಾಗೂ ಬೆಳ್ಳಗಾಗುವ ಸಮಸ್ಯೆ ಉಂಟಾಗುತ್ತದೆ..
ಕೂದಲು ಉದುರುವುದನ್ನು ತಡೆಯಲು ಬ್ಲ್ಯಾಕ್ ಟೀ ಹೇರ್ ಮಾಸ್ಕ್: ಸ್ನಾನದ ನಂತರ ಬ್ಲ್ಯಾಕ್ ಟೀ ನೀರನ್ನು ಕೂದಲಿಗೆ ಹಾಕಿಕೊಳ್ಳುವುದರಿಂದ ಬಿಳಿ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ..
ಹೆನ್ನಾ ಮತ್ತು ಮೊಟ್ಟೆಯ ಹೇರ್ ಪ್ಯಾಕ್: ಹೆನ್ನಾ ಹಾಗೂ ಮೊಟ್ಟೆಯ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುವುದಲ್ಲದೇ ಕೂದಲಿನ ಎಲ್ಲ ಸಮಸ್ಯೆಗಳಿಗೂ ಮುಕ್ತಿ ನೀಡುತ್ತದೆ.\
ಈರುಳ್ಳಿ ಮತ್ತು ನಿಂಬೆ ರಸ ಹೇರ್ ಪ್ಯಾಕ್: ಈರುಳ್ಳಿ ಹಾಗೂ ನಿಂಬೆ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ.
ಆಲೂಗಡ್ಡೆ ಮಾಸ್ಕ್: ಆಲುಗಡ್ಡೆಯನ್ನು ಕುದಿಸಿದ ನೀರನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆಯಿರಿ.. ಇದರಿಂದ ಕೂದಲಿನ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ.