IPL ಮಧ್ಯೆ ಪತ್ನಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾನೆ ಈ ಆಟಗಾರ! ಫೋಟೋ ವೈರಲ್

Wed, 19 Apr 2023-7:04 pm,

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16ರ 26 ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG vs RR) ನಡುವೆ ಇಂದು ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನೊಬ್ಬ ತನ್ನ ಪತ್ನಿಯನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾನಂತೆ. ಅಷ್ಟೇ ಅಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಆತ ವಿಶೇಷ ಸಂದೇಶವನ್ನೂ ಬರೆದು ಕಣ್ಣೀರು ಹಾಕಿದ್ದಾನೆ.

ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ತಮ್ಮ ಪತ್ನಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ.  ಇಂದು ಹೆಟ್ಮೆಯರ್ ಅವರ ಪತ್ನಿ ನಿರ್ವಾಣಿ ಹೆಟ್ಮೆಯರ್ ಹುಟ್ಟುಹಬ್ಬವಾಗಿದೆ. ಈ ಕಾರಣದಿಂದ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಶಿಮ್ರಾನ್ ಹೆಟ್ಮೆಯರ್.

ಶಿಮ್ರಾನ್ ಹೆಟ್ಮೆಯರ್ ಅವರ ಪತ್ನಿ ನಿರ್ವಾಣಿ ವೃತ್ತಿಯಲ್ಲಿ ಮಾಡೆಲ್ ಮತ್ತು ನಟಿ. ಇದಲ್ಲದೆ, ಅವರು ಉದ್ಯಮಿ ಕೂಡ ಹೌದು. ಶಿಮ್ರಾನ್ 2019 ರ ಕ್ರಿಸ್‌ಮಸ್ ಸಂದರ್ಭದಲ್ಲಿ ನಿರ್ವಾಣಿಗೆ ಮ್ಯಾರೇಜ್ ಪ್ರಪೋಸ್ ಮಾಡಿದರು.  

ಶಿಮ್ರಾನ್ ಹೆಟ್ಮೆಯರ್ ಅವರು ನಿರ್ವಾಣಿಯ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. “ಈ ವಿಶೇಷ ದಿನವನ್ನು ನಿನ್ನೊಂದಿಗೆ ಕಳೆಯಲು ಸದ್ಯ ನಾನು ಮನೆಯಲ್ಲಿಲ್ಲ. ಇದನ್ನು ನೆನಪಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ” ಎಂದು ಶಿಮ್ರಾನ್ ಬರೆದುಕೊಂಡಿದ್ದಾರೆ.

ಶಿಮ್ರಾನ್ ಹೆಟ್ಮೆಯರ್ ಅವರ ಪತ್ನಿ ನಿರ್ವಾಣಿ ಸಖತ್ ಸುಂದರಿ, ವರದಿ ಪ್ರಕಾರ ಇಬ್ಬರ ಪ್ರೀತಿ ಶುರುವಾಗಿದ್ದು ಫೇಸ್ ಬುಕ್ ಮೂಲಕವಂತೆ.

ನಿರ್ವಾಣಿ ಅನೇಕ ಬಾರಿ ಐಪಿಎಲ್‌ ಸ್ಟೇಡಿಯಂನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಭಾರತಕ್ಕೆ ಆಗಮಿಸಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link