Team India: ಟೀಂ ಇಂಡಿಯಾದ ಈ ಆಟಗಾರನಿಗೆ ಪ್ರೀತಿಯಲ್ಲಿ ಮತ್ತೆ ಮೋಸ..!

Sun, 09 Jul 2023-3:59 pm,

ವರದಿಗಳ ಪ್ರಕಾರ, ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದರಂತೆ. ಆದರೆ ಈಗ ಅವರಿಬ್ಬರ ಬ್ರೇಕಪ್ ಸುದ್ದಿ ಹೊರಬೀಳುತ್ತಿದೆ. ಕೆಲವು ಸಮಯದಿಂದ ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಈ ಜೋಡಿಯ ಸಂಬಂಧದ ಸುದ್ದಿ ಮುನ್ನೆಲೆಗೆ ಬಂದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ. ಇದರಿಂದಾಗಿ ಅವರ ಬ್ರೇಕಪ್ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ನಿಧಿ ತಪಾಡಿಯಾ ರೂಪದರ್ಶಿ ಮತ್ತು ನಟಿ. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸುದ್ದಿಯಲ್ಲಿರುತ್ತವೆ. ನಿಧಿ ತಪಾಡಿಯಾ ಅವರು Instagramನಲ್ಲಿ 121K ಫಾಲೋವರ್ಸ್‍ ಹೊಂದಿದ್ದಾರೆ. ಇವರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿವಾಸಿ.

ಪೃಥ್ವಿ ಶಾ ಹೊಸ ವರ್ಷ ಪಾರ್ಟಿ ಮಾಡಲು ಪಬ್‌ಗೆ ಹೋಗಿದ್ದರು. ಈ ಪಾರ್ಟಿಯಲ್ಲೂ ನಿಧಿ ತಪಾಡಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಅದೇ ರೀತಿ ಐಪಿಎಲ್ 2023ರ ಸಮಯದಲ್ಲಿ ನಿಧಿ ತಪಾಡಿಯಾ ಮೈದಾನದಲ್ಲಿ ಪೃಥ್ವಿಯನ್ನು ಬೆಂಬಲಿಸಿದ್ದರು.

ಪೃಥ್ವಿ ಶಾ ಈ ಹಿಂದೆ ನಟಿ ಪ್ರಾಚಿ ಸಿಂಗ್ ಜೊತೆ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. 2020ರಲ್ಲೂ ಇಬ್ಬರ ನಡುವಿನ ಸಂಬಂಧದ ಬಗ್ಗೆ ವರದಿಯಾಗಿತ್ತು. ಆದರೆ ಈಗ ಇಬ್ಬರೂ Instagramನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link