ಯಾರ ಕೈಲಿ ಮುರಿಯಲಿಕ್ಕೆ ಆಗಲ್ಲ ಗುರು ಈ ದಾಖಲೆ..!
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1 ಬಾಲ್‌ನಲ್ಲಿ 17 ರನ್ ಗಳಿಸಿದ ವಿಶ್ವದಾಖಲೆಯನ್ನು ಹೊಂದಿರುವ ದಾಖಲೆ ಬಗ್ಗೆ ನೀವು ಎಂದಾದರೂ ಕೇಳಿದ್ದಿರಾ..? ಹೌದು, ನಿಮಗೆ ಈ ದಾಖಲೆ ಅಚ್ಚರಿ ಎನಿಸಬಹುದಾದರೂ ಕೂಡ ಸತ್ಯವಾಗಿದೆ.ಈ ದಾಖಲೆಯನ್ನು ಭಾರತೀಯ ಆಟಗಾರನೊಬ್ಬ ನಿರ್ಮಿಸಿದ್ದಾರೆ.ರೋಹಿತ್ ಶರ್ಮಾ ಮತ್ತು ಕ್ರಿಸ್ ಗೇಲ್ ಅವರಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಸಹ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1 ಎಸೆತದಲ್ಲಿ 17 ರನ್ ಗಳಿಸಲು ಸಾಧ್ಯವಾಗಿಲ್ಲ. ಅಂತದ್ದರಲ್ಲಿ ಈ ದಾಖಲೆ ನಿರ್ಮಿಸಿದವರು ಯಾರು ಎನ್ನುವ ಬಗ್ಗೆ ನಿಮಗೆ ಕುತೂಹಲ ಇರಬಹುದು.
ಅವರು ಬೇರೆ ಯಾರು ಅಲ್ಲ ಭಾರತದ ಮಾಜಿ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್. ಮಾರ್ಚ್ 13, 2004 ರಂದು ಕರಾಚಿಯಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನದ ಬೌಲರ್ ರಾಣಾ ನವೀದ್ ಉಲ್ ಹಸನ್ ಎಸೆತದಲ್ಲಿ 17 ರನ್ ಗಳಿಸಿದರು. ವೀರೇಂದ್ರ ಸೆಹ್ವಾಗ್ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.
13 ಮಾರ್ಚ್ 2004 ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧದ ಏಕದಿನ ಪಂದ್ಯದಲ್ಲಿ, ಪಾಕಿಸ್ತಾನಿ ಬೌಲರ್ ರಾಣಾ ನವೀದ್ ಉಲ್ ಹಸನ್ ಅವರ ಆ ಓವರ್‌ನಲ್ಲಿ ವೀರೇಂದ್ರ ಸೆಹ್ವಾಗ್ 3 ಬೌಂಡರಿಗಳಿಂದ 12 ರನ್ ಮತ್ತು 5 ನೋಬಾಲ್‌ಗಳಿಂದ 5 ಹೆಚ್ಚುವರಿ ರನ್ ಗಳಿಸಿದರು.ಆ ಮೂಲಕ 17 ರನ್ ಗಳಿಸುವ ಮೂಲಕ ನೂತನ ವಿಶ್ವದಾಖಲೆ ನಿರ್ಮಿಸಿದರು.
ವೀರೇಂದ್ರ ಸೆಹ್ವಾಗ್ ಭಾರತದ ಪರ 104 ಟೆಸ್ಟ್‌ಗಳಲ್ಲಿ 49.34 ಸರಾಸರಿಯಲ್ಲಿ 8586 ರನ್ ಗಳಿಸಿದ್ದಾರೆ,
ಇದರಲ್ಲಿ 23 ಶತಕಗಳು ಮತ್ತು 32 ಅರ್ಧಶತಕಗಳು ಸೇರಿವೆ. ಅವರ ಉತ್ತಮ ಸ್ಕೋರ್ 319 ರನ್. ವೀರು 251 ಏಕದಿನ ಪಂದ್ಯಗಳಲ್ಲಿ 15 ಶತಕ ಮತ್ತು 38 ಅರ್ಧಶತಕಗಳೊಂದಿಗೆ 8273 ರನ್ ಗಳಿಸಿದ್ದಾರೆ. ಇದಲ್ಲದೇ ವೀರು 19 ಟಿ20 ಪಂದ್ಯಗಳಲ್ಲಿ 394 ರನ್ ಗಳಿಸಿದ್ದು, ಇದರಲ್ಲಿ 68 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿದೆ.