ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?
)
ನೀರಿನ ಕೊರತೆಯು ಮೂತ್ರಪಿಂಡದ ಕಲ್ಲುಗಳಿಗೆ ಏಕೆ ಕಾರಣವಾಗುತ್ತದೆ ಮತ್ತು ಕಿಡ್ನಿ ಸ್ಟೋನ್ ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.
)
ಮೂತ್ರಪಿಂಡಗಳು ರಕ್ತವನ್ನು ಶೋಧಿಸುತ್ತವೆ ಮತ್ತು ಅದರಲ್ಲಿರುವ ಸೋಡಿಯಂ, ಕ್ಯಾಲ್ಸಿಯಂ ಮತ್ತು ಇತರ ಸೂಕ್ಷ್ಮ ಕಣಗಳನ್ನು ಮೂತ್ರನಾಳದ ಮೂಲಕ ದೇಹದಿಂದ ತೆಗೆದುಹಾಕುತ್ತವೆ. ಆದರೆ ಈ ಖನಿಜಗಳು ನಮ್ಮ ದೇಹದಲ್ಲಿ ವಿಪರೀತವಾದಾಗ, ಮೂತ್ರಪಿಂಡಗಳು ಅವುಗಳನ್ನು ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಅವುಗಳು ಅವುಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಕಲ್ಲುಗಳ ರೂಪವನ್ನು ಪಡೆಯುತ್ತವೆ.
)
ಕಡಿಮೆ ನೀರು ಕುಡಿಯುವುದರಿಂದ ದೇಹವು ನಿರ್ಜಲೀಕರಣಕ್ಕೆ ಬಲಿಯಾಗುವುದಲ್ಲದೆ, ಈ ಸ್ಥಿತಿಯಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯು ವೇಗವಾಗಿ ಹೆಚ್ಚಾಗುತ್ತದೆ. ವಾಸ್ತವವಾಗಿ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿರುವ ಉಪ್ಪು ಮತ್ತು ಖನಿಜಗಳು ಹರಳುಗಳಾಗಿ ಬದಲಾಗುತ್ತವೆ ಮತ್ತು ಕಲ್ಲುಗಳ ರೂಪವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತವೆ.
ನಿಮಗೆ ಒಂದು ಸಾರಿ ಕಿಡ್ನಿ ಸ್ಟೋನ್ ಸಮಸ್ಯೆ ಬಂದರೆ ವಿಪರಿತ ಹೊಟ್ಟೆ ನೋವನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಇದು ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಎಂದರೆ ಒಂದು ರೀತಿಯ ನರಕಯಾತನೆ ಅಂತಾ ಹೇಳಬಹುದು. ಹೀಗಾಗಿ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸುವುದು ತುಂಬಾ ಮುಖ್ಯ.
ಕಿಡ್ನಿಯಲ್ಲಿ ಕಲ್ಲು ಇರುವವರು ಅಥವಾ ಕುಟುಂಬದ ಇತಿಹಾಸ ಹೊಂದಿರುವವರು ದಿನಕ್ಕೆ ಕನಿಷ್ಠ 2 ಲೀಟರ್ ನಿಂದ 3 ಲೀಟರ್ ನೀರು ಕುಡಿಯಬೇಕು. ಹೊಲದಲ್ಲಿ ಕೆಲಸ ಮಾಡಿದರೆ ಇನ್ನೂ ಹೆಚ್ಚು ಕುಡಿಯಬೇಕು. ಜೊತೆಗೆ ಉಪ್ಪು ಸೇವನೆಯನ್ನು ಕಡಿಮೆ ಮಾಡಬೇಕು.
ಕಿಡ್ನಿ ಸ್ಟೋನ್ ರೋಗಿಗಳು ಕೋಳಿ ಮತ್ತು ಮಾಂಸವನ್ನು ಕಡಿಮೆ ಸೇವಿಸಬೇಕು. ಹೆಚ್ಚು ನೀರು ಕುಡಿಯುವ ಮೂಲಕ ಮೂತ್ರಪಿಂಡಗಳು ಈ ಖನಿಜಗಳನ್ನು ಫಿಲ್ಟರ್ ಮಾಡುತ್ತವೆ, ಇದರಿಂದಾಗಿ ಕಲ್ಲುಗಳು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಹೀಗಾಗಿ ಪ್ರತಿದಿನವೂ ನಿಯಮಿತವಾಗಿ ನೀರು ಕುಡಿಯುತ್ತಿದ್ದರೆ ನೀವು ಸದಾ ಆರೋಗ್ಯವಾಗಿರುತ್ತೀರಿ...