ತನ್ನ ಗಂಡನಿಂತ ಮೊದಲು ಕಪ್ಪೆಗಳಿಗೆ ಕಿಸ್ ಮಾಡಿದ್ರಂತೆ ದಕ್ಷಿಣದ ಈ ಸ್ಟಾರ್ ನಟಿ! ಸದ್ಯ ಈಕೆ ಭಾರತೀಯ ಚಿತ್ರರಂಗವನ್ನೇ ಆಳುತ್ತಿರುವ ಕೋಟ್ಯಾಧಿಪತಿ

Sat, 06 Apr 2024-7:47 pm,

ಟೈಮ್ಸ್ ವರದಿ ಪ್ರಕಾರ, ತಾಪ್ಸಿ ತನ್ನ ಮದುವೆಗೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ಮೌನ ಮುರಿದಿದ್ದಾರೆ. ತನ್ನ ಮದುವೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪದೇ ಪದೇ ಕೇಳುವುದು ನನಗೆ ಇಷ್ಟವಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದು, ಸಮಯ ಬಂದಾಗ ಅಧಿಕೃತ ಘೋಷಣೆ ಮಾಡುತ್ತೇನೆ ಎಂದಿದ್ದಾರೆ.

ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ ಕಳೆದ 10 ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಎಂದು ತಿಳಿದುಬಂದಿದೆ. “ಮಥಿಯಾಸ್ ಜೊತೆ ಸಂಬಂಧ ಬೆಳೆಸಿದ ಒಂದು ವರ್ಷದೊಳಗೆ ಆತನನ್ನು ಮದುವೆಯಾಗುವುದು ಖಚಿತ ಎಂದು ಭಾವಿಸಿದ್ದೆ. ನನ್ನ ಸಂಬಂಧದ ಬಗ್ಗೆ ನಾನು ಪ್ರಾಮಾಣಿಕನಾಗಿದ್ದೇನೆ” ಎಂದಿದ್ದಾರೆ.

ಅಷ್ಟೇ ಅಲ್ಲದೆ, ತಾಪ್ಸಿ ತನ್ನ ರಾಜಕುಮಾರನನ್ನು ಭೇಟಿ ಮಾಡುವ ಮೊದಲು ಅನೇಕ ಕಪ್ಪೆಗಳಿಗೆ ಕಿಸ್ ಮಾಡಿದ್ದಾರೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

“ನಾನು ನನ್ನ ರಾಜಕುಮಾರನನ್ನು ಭೇಟಿಯಾಗುವ ಮೊದಲು ಅನೇಕ ಕಪ್ಪೆಗಳಿಗೆ ಕಿಸ್ ಮಾಡಿದ್ದೆ. ಆದರೆ ನನಗೆ ತಿಳುವಳಿಕೆ ಬಂದ ನಂತರ ನಾನು ಓರ್ವ ವ್ಯಕ್ತಿಗೆ ಮೀಸಲಾಗಿರಲು ಇಚ್ಛಿಸಿದೆ. ಇದಕ್ಕೆ ಕಾರಣ ನನ್ನವನು. ಅವನು ತುಂಬಾ ಪ್ರಬುದ್ಧ ವ್ಯಕ್ತಿ, ಆತನ ವ್ಯಕ್ತಿತ್ವ ನನ್ನಲ್ಲಿ ತುಂಬಾ ಬದಲಾವಣೆ ತಂದಿದೆ” ಎಂದು ತಾಪ್ಸಿ ಹೇಳಿದ್ದಾರೆ.

ಅಂದಹಾಗೆ ನಟಿ ತಾಪ್ಸಿ ಪನ್ನು ಅಂದಾಜು 4 ಕೋಟಿ ವಾರ್ಷಿಕ ಆದಾಯ ಹೊಂದಿದ್ದಾರೆ. ಐಷಾರಾಮಿ ಜೀವನ ನಡೆಸುತ್ತಿರುವ ಪನ್ನು, ಅಂದಾಜು ನಿವ್ವಳ ಮೌಲ್ಯದ $6 ಮಿಲಿಯನ್  ಅಂದರೆ ರೂ. 46 ಕೋಟಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link