ನಟಿ ರೇಖಾ ಅವರ ತಂದೆ- ತಾಯಿ ಯಾರು ಗೊತ್ತಾ..? ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯನ್ನೆ ಆಳಿದವರು ಈ ಇಬ್ಬರು!
Actress Rekha: ನಟಿ ರೇಖಾ ಅವರು ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದಿಂದ ಒಳ್ಳೆ ಹೆಸರು ಪಡೆದಿದ್ದಾರೆ.ತಮ್ಮ 70 ವರ್ಷದ ಹರೆಯದಲ್ಲಿಯೂ ನಟಿ ತಮ್ಮ ಸೌಂದರ್ಯದ ಮೂಲಕ ಸಂಚಲನ ಸೃಷ್ಟಿದ್ದಾರೆ.
ಇಂದಿಗೂ, ಹಲವರಿಗೆ ಗೊತ್ತಿರದ ವಿಚಾರ ಏನು ಅಂದರೆ, ನಟಿ ರೇಖಾ ಹೇಗೆ ದೊಡ್ಡ ಸ್ಟಾರ್ ನಟಿಯೋ ಅದೇ ರೀತಿ ನಟಿ ರೇಕಾ ಅವರ ತಂದೆ ತಾಯಿ ಕೂಡ ಒಂದು ಕಾಲದಲ್ಲಿ ಸ್ಟಾರ್ ನಟರಾಗಿ ಸಿನಿಮಾ ಇಂಡಸ್ಟ್ರಿಯನ್ನು ಆಳಿದವರು.
ನಿಮಗೆ ನಟಿ ಪುಷ್ಪವಲ್ಲಿ ಗೊತ್ತಿರಬಹುದು, ನಟಿ ಪುಷ್ಪವಲ್ಲಿ ಅವರು ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನೆಯ ಮೂಲಕ ಹೆಜ್ಜೆ ಗುರುತುಗಳನ್ನು ಅಭಿಮಾನಿಗಲ ಎದೆಯ ಮೇಲೆ ಹಚ್ಚೆ ಹಾಕಿದವರು.
ಇನ್ನೂ, ನಟಿ ರೇಖಾ ಅವರ ತಂದೆ ಆಗಿನ ಕಾಲಕ್ಕೆ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್‌ಸ್ಟಾರ್ ಆಗಿದ್ದ ಜೆಮಿನಿ ಗಣೇಶನ್ ಅವರು.
ರೇಖಾ ಅವರ ತಾಯಿ ಪುಷ್ಪವಲ್ಲಿ, ಜೆಮಿನಿ ಗಣೇಶನ್ ಅವರ ಮೂರನೇ ಪತ್ನಿಯಾಗಿದ್ದರು. ಮೊದಲನೆ ಹೆಂಡತಿಯನ್ನು ಬಿಟ್ಟು ಬರಲು ಜೆಮಿನಿ ಗಣೇಶನ್ ಅವರು ನಿರಾಕರಿಸಿದ್ದ ಕಾರಣ ಪುಷ್ಪವಲ್ಲಿ ಹಾಗೂ ಜೆಮಿನಿ ಗಣೇಶನ್ ಅವರ ಸಂಬಂಧ ಹದಗೆಟ್ಟಿತ್ತು.