16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !
ಸಿಎಂ ಪುತ್ರನನ್ನೇ ಪ್ರೀತಿಸಿ ಮದುವೆ ಆಗಿರುವ ಈ ಖ್ಯಾತ ನಟಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಈ ಖ್ಯಾತ ನಟಿ ಜೆನಿಲಿಯಾ ಡಿಸೋಜಾ. ಮುಖ್ಯಮಂತ್ರಿಯ ಮಗ ಹಾಗೂ ರಿತೇಶ್ ದೇಶಮುಖ್ ಜೊತೆ 16 ನೇ ವಯಸ್ಸಿಗೆ ಪ್ರೀತಿಯಲ್ಲಿ ಬಿದ್ದರು. ‘ತುಜೆ ಮೇರಿ ಕಸಮ್’ ಸೆಟ್ ನಲ್ಲಿ ಇವರಿಬ್ಬರ ಮೊದಲ ಭೇಟಿಯಾಗಿತ್ತು.
ನಟ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ನಡುವೆ ಸ್ನೇಹ ಬೆಳೆಯಿತು. ಜೆನಿಲಿಯಾ ರಿತೇಶ್ ಅವರ ವ್ಯಕ್ತಿತ್ವವನ್ನು ಇಷ್ಟ ಪಡುತ್ತಿದ್ದರು. ಬಳಿಕ ಜೆನಿಲಿಯಾ ಹಾಗೂ ರಿತೇಶ್ ಸ್ನೇಹ ಪ್ರೀತಿಗೆ ತಿರುಗಿತು. 9 ವರ್ಷಗಳ ಕಾಲ ಇಬ್ಬರು ಡೇಟಿಂಗ್ ಮಾಡಿದರು.
ಬಳಿಕ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ಮದುವೆಯಾದರು. ಮದುವೆಯ ನಂತರ ಜೆನಿಲಿಯಾ ನಟನೆಯಿಂದ ದರ ಉಳಿದರು. ಈ ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ.
ಜೆನಿಲಿಯಾ ಮಕ್ಕಳಾದ ಬಳಿಕ 10 ವರ್ಷದ ನಂತರ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಿತೇಶ್ ಜೊತೆ ನಟಿಸಿದ್ದಾರೆ. ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಜೆನಿಲಿಯಾ ಮತ್ತು ರಿತೇಶ್ ಕೂಡ ಒಬ್ಬರು.
ಮದುವೆಯಾಗಿ 12 ವರ್ಷ ಕಳೆದರೂ ಇಬ್ಬರೂ ಪರಸ್ಪರ ಪ್ರೀತಿಸುವುದನ್ನ ನಿಲ್ಲಿಸಿಲ್ಲ. ಈ ಕ್ಯೂಟ್ ಕಪಲ್ ಕೆಮೆಸ್ಟ್ರಿ ಅನೇಕ ಜನರಿಗೆ ಮಾದರಿಯಾಗಿದೆ.