Tortoise Ring Rules: ಈ ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಧರಿಸಬಾರದು ಆಮೆ ಉಂಗುರ, ಇಲ್ಲವೇ ಬೆಂಬಿಡದೆ ಕಾಡುತ್ತೆ ದುರಾದೃಷ್ಟ
ಇತ್ತೀಚಿನ ದಿನಗಳಲ್ಲಿ ಆಮೆ ಉಂಗುರದ ಟ್ರೆಂಡ್ ಹೆಚ್ಚಾಗಿದೆ. ಆಮೆ ಉಂಗುರವನ್ನು ಅದೃಷ್ಟದ ಉಂಗುರ, ಇದರಿಂದ ಜೀವನದಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಆಮೆ ಉಂಗುರವನ್ನು ಯಾವ ಲೋಹದಲ್ಲಿ ತಯಾರಿಸಿ ಧರಿಸಬೇಕು? ಎಲ್ಲರೂ ಇದನ್ನು ಧರಿಸಬಹುದೇ ಎಂದು ಎಂದಾದರೂ ಯೋಚಿಸಿದ್ದೀರಾ?
ರತ್ನಶಾಸ್ತ್ರದ ಪ್ರಕಾರ, ಆಮೆ ಉಂಗುರವನ್ನು ಚಿನ್ನದ ಬದಲಿಗೆ ಬೆಳ್ಳಿಯಲ್ಲಿ ತಯಾರಿಸಿ ಧರಿಸುವುದು ಅತ್ಯಂತ ಶುಭ ಎನ್ನಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಆಮೆ ಉಂಗುರವನ್ನು ಧಾರಣೆ ಮಾಡಬಾರದು. ಇದರಿಂದ ಅವರ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳು ಸೃಷ್ಟಿಯಾಗುತ್ತವೆ ಎನ್ನಲಾಗುತ್ತದೆ. ಆ ರಾಶಿಗಳೆಂದರೆ...
ಮೇಷ ರಾಶಿಯ ಜನರು ಅಪ್ಪಿತಪ್ಪಿಯೂ ಆಮೆ ಉಂಗುರವನ್ನು ಧಾರಣೆ ಮಾಡಬಾರದು. ಇದರಿಂದ ಜೀವನದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚು ಕಾಡುತ್ತದೆ.
ಆಮೆ ಉಂಗುರ ಧಾರಣೆಯಿಂದ ಕನ್ಯಾ ರಾಶಿಯವರು ಧನ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ವೃಶ್ಚಿಕ ರಾಶಿಯವರಿಗೂ ಕೂಡ ಆಮೆ ಉಂಗುರ ಧರಿಸುವುದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗಬಹುದು.
ಆಮೆ ಉಂಗುರ ಧರಿಸುವುದರಿಂದ ಮೀನ ರಾಶಿಯವರು ವೃತ್ತಿ ಬದುಕಿನಲ್ಲಿ ತೊಂದರೆ ಅನುಭವಿಸುವುದರ ಜೊತೆಗೆ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.