30 ವರ್ಷಗಳ ಬಳಿಕ ಶನಿಯ ಸ್ವಂತ ರಾಶಿಯಲ್ಲಿ ಕೇಂದ್ರ ತ್ರಿಕೋನ ರಾಜಯೋಗ, ಈ ರಾಶಿಯವರಿಗೆ ರಾಜವೈಭೋಗ
30ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿಯು 2025ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಶನಿಯ ನೇರ ಸಂಚಾರದಿಂದ ಶುಭಕರವಾದ ಕೇಂದ್ರ ತ್ರಿಕೋನ ರಾಜಯೋಗ ನಿರ್ಮಾಣವಾಗುತ್ತಿದ್ದು, ಮೂರು ರಾಶಿಯವರ ಬದುಕಿನಲ್ಲಿ ಇಷ್ಟಾರ್ಥ ಸಿದ್ಧಿ, ರಾಜವೈಭೋಗವನ್ನು ಅನುಭವಿಸುವರು ಎನ್ನಲಾಗುತ್ತಿದೆ.
ಶನಿಯ ವಿಶೇಷ ಆಶೀರ್ವಾದ ಈ ರಾಶಿಯವರಿಗಿದ್ದು ಉದ್ಯೋಗ-ವ್ಯವಹಾರದಲ್ಲಿ ಒಳ್ಳೆಯ ಫಲಗಳನ್ನು ಕಾಣಬಹುದು. ಬಹುದಿನಗಳ ಕನಸು ನನಸಾಗುವುದರಿಂದ ಮನಸ್ಸಿಗೆ ಸಂತೋಷ. ಸಂಪತ್ತು ಹೆಚ್ಚಳವಾಗುವ ಸಾಧ್ಯತೆ.
ಶನಿ ಕೃಪೆಯಿಂದ 2025ರ ಮಾರ್ಚ್ ವರೆಗೂ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಅದೃಷ್ಟದ ಬೆಂಬಲ ದೊರೆಯಲಿದೆ. ವಿದೇಶ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಪರ್ ಲಾಭ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ.
ಶನಿಯಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗದಿಂದಾಗಿ ಮದುವೆ ಮಾತುಕತೆಗಳು ಮುಂದುವರೆಯಲಿವೆ. ವ್ಯವಹಾರದಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.