ದರ್ಶನ್‌ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್‌ ನೇಮ್‌ ಏನು ಗೊತ್ತಾ?

Sun, 16 Jun 2024-2:07 pm,

ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದುಕೊಂಡ ನಟ ದರ್ಶನ್ ಅವರ ನಿಜವಾದ ಹೆಸರು ಬೇರೆಯಾಗಿದೆ. ದರ್ಶನ್ ಎನ್ನುವುದು ಅವರ ನಿಜ ನಾಮವಲ್ಲ. 

ದರ್ಶನ್  ಹುಟ್ಟಿದಾಗ ಅವರಿಗೆ ಬೇರೆ ಹೆಸರಿಡಲಾಗಿತ್ತು. 1977 ಫೆಬ್ರವರಿ 16ರಂದು ಹುಟ್ಟಿದ  ಕೊಡಗಿನ ಪೊನ್ನಂಪೇಟೆಯಲ್ಲಿ ಮೀನಾ ಹಾಗೂ ಖ್ಯಾತ ಖಳನಟ ತೂಗುದೀಪ್ ಶ್ರೀನಿವಾಸ್ ಅವರ ಪುತ್ರನಾಗಿ ದರ್ಶನ್‌ ಜನಿಸಿದರು. 

ದರ್ಶನ್ ಅವರಿಗೆ ದಿವ್ಯಾ ಎಂಬ ಸಹೋದರಿ ಮತ್ತು ದಿನಕರ್ ಎಂಬ ತಮ್ಮನಿದ್ದಾರೆ. ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದ ದರ್ಶನ್‌ ಅಸಿಸ್ಟೆಂಟ್ ಕ್ಯಾಮೆರಾ ಮ್ಯಾನ್, ಲೈಟ್ ಬಾಯ್ ಆಗಿ ಸಿನಿಮಾದಲ್ಲಿ ಕೆಲಸ ಮಾಡಿದರು. 

ಆ ಬಳಿಕ ಪೋಷಕ ಪಾತ್ರ, ಸೀರಿಯಲ್‌ಗಳಲ್ಲಿ ಚಿಕ್ಕಪುಟ್ಟ ಪಾತ್ರಗಳ ಮೂಲಕ ಸ್ಕ್ರೀನ್‌ ಮೇಲೆ ಕಾಣಲು ಆರಂಭಿಸಿದರು. ಪಿ.ಎನ್ ಸತ್ಯ ಅವರ 2001 ರ ಸಿನಿಮಾ ಮೆಜೆಸ್ಟಿಕ್ ಮೂಲಕ ದರ್ಶನ್‌ ಬಿಗ್‌ ಹಿಟ್‌ ಪಡೆದರು. 

ಮೆಜೆಸ್ಟಿಕ್‌ ಸಿನಿಮಾದಲ್ಲಿ ದಾಸ ಎನ್ನುವ ಪಾತ್ರ ಮಾಡಿದ್ದ ದರ್ಶನ್ ಆ ಬಳಿಕ ಕಿಟ್ಟಿ, ನಿಂಗೋಸ್ಕರ, ನೀನಂದ್ರೆ ಇಷ್ಟ, ದಾಸ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಚಾಲೆಂಜಿಂಗ್‌ ಸ್ಟಾರ್‌ ಆದರು. 

ಕೆಮಿಕಲ್ ಎಂಜಿನಯರ್ ವಿದ್ಯಾರ್ಥಿನಿಯಾಗಿದ್ದ ವಿಜಯಲಕ್ಷ್ಮಿ ಅವರನ್ನು 2003 ರಲ್ಲಿ ಧರ್ಮಸ್ಥಳದಲ್ಲಿ ದರ್ಶನ್ ಮದುವೆಯಾದರು.

ನಟ ದರ್ಶನ್ ಅವರ ನಿಜವಾದ ಹೆಸರು ಹೇಮಂತ್ ಕುಮಾರ್. ಹುಟ್ಟಿದಾಗ ಹೇಮಂತ್ ಕುಮಾರ್ ಎಂದೇ ಹೆಸರಿಟ್ಟಿದ್ದರಂತೆ. ಆ ನಂತರ ದರ್ಶನ್‌ ಎಂದು ಬದಲಿಸಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link