ಮೂರು ಶತಮಾನಗಳ ಬಳಿಕ ಡಿಸೆಂಬರ್ ಅಂತ್ಯದಲ್ಲಿ ಮೂರು ರಾಜಯೋಗಗಳು, ವರ್ಷಾರಂಭದಲ್ಲಿ ಈ ಜನರಿಗೆ ಬಂಪರ್ ಲಾಭ!
Auspicious Rajyogas December 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ಅಂತ್ಯದಲ್ಲಿ ಮೂರು ರಾಜಯೋಗಗಳು ರೂಪುಗೊಳ್ಳುತ್ತಿದ್ದು, ಇದರಿಂದ ಕೆಲ ರಾಶಿಗಳ ಜನರ್ ಭಾಗ್ಯದ ಬಾಗಿಲನ್ನೇ ತೆರೆಯಲಿವೆ. (Spiritual News In Kannada)
ಮೇಷ ರಾಶಿ: ಈ ಮೂರು ರಾಜಯೋಗಗಳ ನಿರ್ಮಾಣ ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಶುಭಫಲಗಳನ್ನು ನೀಡಲಿವೆ. ಏಕೆಂದರೆ ನಿಮ್ಮ ಗೋಚರ ಜಾತಕದಲ್ಲಿ ಮಾಲವ್ಯ ಹಾಗೂ ಕೇಂದ್ರ ತ್ರಿಕೋನ ರಾಜಯೋಗಗಳು ರೂಪುಗೊಳ್ಳಲಿವೆ. ಹೀಗಾಗಿ ವರ್ಷ 2024ರ ಆರಂಭ ವಿಶೇಷವಾಗಿ ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹೊಳಪನ್ನು ತರಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಗುರು ಗ್ರಹದ ಕೃಪೆಯಿಂದ ನಿಮ್ಮ ವೈವಾಹಿಕ ಜೀವನ ಖುಷಿಗಳಿಂದ ಕೂಡರಲಿದೆ. ಅವಿವಾಹಿತರಿಗೆ ವಿವಾಹ ನಿಶ್ಚಿತಾರ್ಥ ನೆರವೇರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಎಲ್ಲಾ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಹೊಸ ಕೆಲಸ ಆರಂಭಕ್ಕೆ ಈ ಸಮಯ ಸೂಕ್ತವಾಗಿದೆ.
ಮಕರ ರಾಶಿ: ಈ ಮೂರು ರಾಜಯೋಗಗಳ ನಿರ್ಮಾಣದ ಅವಧಿಯಲ್ಲಿ ಶನಿ ದೇವ ನಿಮ್ಮ ಗೋಚರ ಜಾತಕದ ಧನ ಸ್ಥಾನದಲ್ಲಿ ಇರಲಿದ್ದರೆ, ಗುರು ನಿಮ್ಮ ಜಾತಕದ ಪಂಚಮ ಭಾವದಲ್ಲಿ ಮಾಲವ್ಯ ರಾಜಯೋಗ ರೂಪಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಧನಸಂಪತ್ತಿನಲ್ಲಿ ಅಪಾರ ವೃದ್ಧಿಯಾಗಲಿದೆ. ಅದರಲ್ಲಿಯೂ ವಿಶೇಷವಾಗಿ ಮಾಡೆಲಿಂಗ್, ಚಿತ್ರೋದ್ಯಮ, ನಟನೆ, ಸಂಗೀತ, ಹೊಟೇಲ್ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಅಪಾರ ಲಾಭ ಸಿಗಲಿದೆ. ನೀವು ವಿದ್ಯಾರ್ಥಿಗಳಾಗಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಸರ್ಕಾರಿ ನೌಕರಿ ಸಿಗುವ ಯೋಗವಿದೆ, ನೌಕರವರ್ಗದ ಜನರಿಗೆ ಬಡ್ತಿ ಭಾಗ್ಯ ಪ್ರಾಪ್ತಿಯಾಗಲಿದೆ.
ಧನು ರಾಶಿ: ಮಾಲವ್ಯ ಹಾಗೂ ರುಚಕ ರಾಜಯೋಗದಿಂದ ನಿಮಗೆ ಶುಕ್ರ ಹಾಗೂ ಮಂಗಳ ದೇವರ ಅಪಾರ ಕೃಪೆ ಪ್ರಾಪ್ತಿಯಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಿದೇಶ ಯಾತ್ರೆಗಳಿಂದ ಲಾಭ ಸಿಗಲಿದೆ. ನೌಕರಿಯ ಹುಡುಕಾಟದಲ್ಲಿ ನಿರತರಾದವರಿಗೆ ದೇಶ ವಿದೇಶಗಳಿಂದ ನೌಕರಿಯ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ವಿದೇಶಕ್ಕೆ ತೆರಳಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳ ಕನಸು ನನಸಾಗುವ ಸಾಧ್ಯತೆ ಇದೆ. ಇದಲ್ಲದೆ ಶನಿ ಹಾಗೂ ಶುಕ್ರರಿಂದ ನಿರ್ಮಾಣಗೊಳ್ಳುತ್ತಿರುವ ನವಪಂಚಮ ಯೋಗ, ಗುರು ಹಾಗೂ ಶುಕ್ರರಿಂದ ನಿರ್ಮಾಣಗೊಳ್ಳುತ್ತಿರುವ ಸಮಸಪ್ತಕ ಯೋಗ. ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿವೆ. ನೀವು ನಿಮ್ಮ ಆತ್ಮವಿಶ್ವಾಸದ ಬಲದಿಂದ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ನಿಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗುವಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)