ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು ಇವರೇ ನೋಡಿ!
ಪಾರ್ಟಿಗಳ ಸಂದರ್ಭದಲ್ಲಿ ಆಲ್ಕೋಹಾಲ್ ಸೇವನೆ ಇಂದಿನ ಯುಗದಲ್ಲಿ ಸಾಮಾನ್ಯ. ಅಂತೆಯೇ ಆಲ್ಕೋಹಾಲ್ ಸೇವಿಸುತ್ತಾ ಸಂಭ್ರಮಿಸುವುದು ಭಾರತೀಯ ಕ್ರಿಕೆಟ್ ತಂಡದಲ ಬಹಳ ಹಳೆಯ ಸಂಸ್ಕೃತಿ. ಅನೇಕ ಕ್ರಿಕೆಟಿಗರು ಮದ್ಯ ಸೇವನೆ ಮಾಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೂ ಮದ್ಯ ಮುಟ್ಟದ ಕೆಲವು ಆಟಗಾರರು ಇದ್ದಾರೆ.
ಟೀಂ ಇಂಡಿಯಾದ ಈ 4 ಆಟಗಾರರು ಆಲ್ಕೋಹಾಲ್ ಸೇವನೆಯಿಂದ ದೂರ ಉಳಿದಿದ್ದಾರೆ. ಅವರು ಯಾರೆಂಬುದನ್ನು ಮುಂದೆ ತಿಳಿಯೋಣ.
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್. ಟೀಂ ಇಂಡಿಯಾ ಪರ ಒಟ್ಟು 21 ಟೆಸ್ಟ್ ಪಂದ್ಯ, 119 ODI ಪಂದ್ಯ ಮತ್ತು 55 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಭುವಿ ಟೀಂ ಇಂಡಿಯಾದಲ್ಲಿ ಕ್ಲೀನ್ ಇಮೇಜ್ ಹೊಂದಿರುವ ಕ್ರಿಕೆಟಿಗ. ಇವರು ಮದ್ಯ ಸೇವಿಸುವುದಿಲ್ಲ, ಮಾತ್ರವಲ್ಲದೆ, ಧೂಮಪಾನ ಕೂಡ ಮಾಡುವುದಿಲ್ಲ.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಕೋಚ್ ರಾಹುಲ್ ದ್ರಾವಿಡ್ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಕೆಲ ಕಾಲ ಭಾರತ ತಂಡದ ನಾಯಕರೂ ಆಗಿದ್ದರು. ಇವರು ಟೀಂ ಇಂಡಿಯಾ ಪರ 164 ಟೆಸ್ಟ್ ಪಂದ್ಯಗಳಲ್ಲಿ 52.31 ಸರಾಸರಿಯಲ್ಲಿ 13288 ರನ್ ಗಳಿಸಿದ್ದಾರೆ. ಅಲ್ಲದೆ, 344 ODI ಪಂದ್ಯಗಳಲ್ಲಿ 39.16 ರ ಸರಾಸರಿಯಲ್ಲಿ 10889 ರನ್ ಗಳಿಸಿದ್ದಾರೆ. ಟೀಂ ಇಂಡಿಯಾದ ವಾಲ್ ಎಂದೇ ರಾಹುಲ್ ದ್ರಾವಿಡ್ ಅವರನ್ನು ಕರೆಯಲಾಗುತ್ತದೆ. ಇನ್ನು starsunfolded.com ವರದಿಯ ಪ್ರಕಾರ, ರಾಹುಲ್ ದ್ರಾವಿಡ್ ಧೂಮಪಾನ ಮಾಡಲ್ಲ ಮತ್ತು ಮದ್ಯ ಸೇವಿಸುವುದಿಲ್ಲ.
ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕೂಡ ಮದ್ಯಪಾನದಿಂದ ದೂರ ಉಳಿದಿದ್ದಾರೆ. starsunfolded.com ವರದಿಯ ಪ್ರಕಾರ, ಗೌತಮ್ ಗಂಭೀರ್ ಧೂಮಪಾನ ಕೂಡ ಮಾಡುವುದಿಲ್ಲ. ಒಮ್ಮೆ ಮದ್ಯ ಸೇವಿಸಿದ್ದರಂತೆ, ಆದರೆ ಅದೇ ಮೊದಲು ಅದೇ ಕೊನೆ ಎಂಬಂತೆ ಇದೀಗ ದೂರ ಉಳಿದಿದ್ದಾರೆ.