ತೆರೆಯುವುದು ಈ ರಾಶಿಯವರ ಪ್ರಗತಿಯ ಬಾಗಿಲು ! ಒಲಿದು ಬರುವುದು ಐಷಾರಾಮಿ ಜೀವನ, ಅಷ್ಟೈಶ್ವರ್ಯ
ಸಂಪತ್ತು, ಐಷಾರಾಮಿ ಅಂಶವಾದ ಶುಕ್ರ ಜುಲೈ 22 ರಿಂದ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಶುಕ್ರನ ಚಲನೆಯಲ್ಲಿನ ಬದಲಾವಣೆ ಮೂರು ರಾಶಿಯವರ ಜೀವನದಲ್ಲಿ ಕಾಣಿಸುತ್ತದೆ.
ಶುಕ್ರನ ಹಿಮ್ಮುಖ ಚಲನೆಯು ಮೂರು ರಾಶಿಯ ಜನರ ಜನಂ ಜಾತಕದಲ್ಲಿ ಶುಭ ಫಲವನ್ನೇ ನೀಡಲಿದೆ. ಈ ರಾಶಿಯವರ ಜೀವನದಲ್ಲಿ ಸಂಪತ್ತು, ಸಂತೋಷ , ಪ್ರೀತಿ ಮತ್ತು ಪ್ರಣಯ ಎಲ್ಲವೂ ವೃದ್ದಿಯಾಗುವುದು.
ಶುಕ್ರನ ಹಿಮ್ಮುಖ ಚಲನೆಯು ತುಲಾ ರಾಶಿಯವರ ಜೀವನದ ಮೇಲೆ ದೊಡ್ಡ ಮಟ್ಟಿನ ಪರಿಣಾಮ ಬೀರುತ್ತದೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗಿಗಳ ಸ್ಥಾನ ಮತ್ತು ವೇತನದಲ್ಲಿ ಹೆಚ್ಚಳವಾಗಬಹುದು. ವಿತ್ತೀಯ ಲಾಭದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಶುಕ್ರ ಹಿಮ್ಮುಖ ಚಲನೆ ಮೇಷ ರಾಶಿಯ ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಈ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಸಾಕಷ್ಟು ಹಣ ಹರಿದು ಬರುತ್ತದೆ. ಐಷಾರಾಮಿ ಜೀವನ ಒದಗಿ ಬರುವುದು. ವಾಹನ ಅಥವಾ ಸ್ವಂತ ಮನೆಯ ಭಾಗ್ಯ ಕೂಡಿ ಬರುವುದು. ವ್ಯಾಪಾರಸ್ಥರಿಗೆ ಲಾಭವಾಗಲಿದೆ.
ಮಿಥುನ ರಾಶಿ :ಹಿಮ್ಮುಖ ಚಲಿಸುವ ಶುಕ್ರ ಮಿಥುನ ರಾಶಿಯವರ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ. ಈ ಸಮಯದಲ್ಲಿ ಧನಲಾಭವಿರುತ್ತದೆ. ಇದರಿಂದಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಮಾತಿನಲ್ಲಿ ಮಾಧುರ್ಯ ಹೆಚ್ಚುತ್ತದೆ. ಈ ಕಾರಣದಿಂದಾಗಿ ಜನ ನಿಮ್ಮತ್ತ ಆಕರ್ಷಿತರಾಗುತ್ತಾರೆ.
( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)