2025ರಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ !ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಹಣದ ಕೊರತೆ ಒಂದು ದಿನಕ್ಕೂ ಕಾಡದು !ನಿತ್ಯ ಸಂಭ್ರಮಿಸುವ ಪರ್ವ ಕಾಲ
ವೈದಿಕ ಜ್ಯೋತಿಷ್ಯದ ಪ್ರಕಾರ, ಗುರು ಗ್ರಹ ತನ್ನ ಚಲನೆ ಅಥವಾ ನಡೆಯನ್ನು ಬದಲಾಯಿಸುವುದರಿಂದ ವ್ಯಕ್ತಿಯ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರಬಹುದು.
ದೇವಗುರು ಬೃಹಸ್ಪತಿ 2025 ರಲ್ಲಿ ಮೂರು ಬಾರಿ ತನ್ನ ನಡೆಯನ್ನು ಬದಲಾಯಿಸಲಿದ್ದಾರೆ. ಗುರುವಿನ ನಡೆ ಬದಲಾವಣೆ ಮೂರು ರಾಶಿಯವರ ಬಾಳು ಬೆಳಗಲಿದೆ. ಈ ರಾಶಿಯವರು ಮಣ್ಣು ಮುಟ್ಟಿದರೂ ಅದು ಹೊನ್ನಾಗಿ ಪರಿವರ್ತನೆಯಾಗುವ ಕಾಲ ಇದು.
ವೃಷಭ ರಾಶಿ : ಪ್ರತಿ ಕೆಲಸದಲ್ಲಿ ಉತ್ತಮ ಪ್ರಗತಿಯಾಗುವುದು. ದೊಡ್ಡ ಮೊತ್ತವನ್ನು ಗಳಿಸುವ ಅವಕಾಶವನ್ನು ಪಡೆಯುತ್ತೀರಿ. ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಗಳಿವೆ. ಹೊಸ ಕೆಲಸ ಆರಂಭಿಸಬೇಕು ಎಂದಿದ್ದರೆ ನಿರ್ಭೀತಿಯಿಂದ ಮುಂದುವರೆಯಿರಿ.
ಧನು ರಾಶಿ : ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಅವಶ್ಯಕತೆ ಇರುತ್ತದೆ. ಹೊಸ ವ್ಯವಹಾರ ಆರಂಭಿಸಲು ಅಥವಾ ಕೆಲಸ ಬದಲಾಯಿಸಲು ಇದು ಸರಿಯಾದ ಸಮಯ. ಉನ್ನತ ಸ್ಥಾನದ ಉದ್ಯೋಗ ನಿಮಗೆ ಒಲಿದು ಬರುವುದು. ಹೆಚ್ಚು ಹಣ ಸಂಪಾದಿಸುವಿರಿ.
ಮಿಥುನ ರಾಶಿ : ವೃಶ್ಚಿಕ ರಾಶಿಯವರ ಸುವರ್ಣ ದಿನಗಳು ಆರಂಭವಾಗಲಿವೆ. ನೀವಿಡುವ ಹೆಜ್ಜೆ ಯಶಸ್ಸಿನತ್ತಲೇ ಸಾಗುವುದು. ಕೆಲವು ಸಮಸ್ಯೆಗಳು ಉದ್ಭವಿಸಬಹುದು ಆದರೆ ಎಲ್ಲವನ್ನೂ ನೀವು ಉತ್ತಮವಾಗಿ ನಿಭಾಯಿಸಿಕೊಂಡು ಹೋಗುವಿರಿ.
ಮೀನ ರಾಶಿ : ಯಶಸ್ಸಿಗೆ ಹೊಸ ಅವಕಾಶಗಳು ದೊರೆಯಲಿವೆ. ಬಹುದಿನಗಳಿಂದ ನಿಂತು ಹೋಗಿರುವ ಕೆಲಸ ಶೀಘ್ರ ಪೂರ್ಣಗೊಳ್ಳಲಿದೆ. ಸಂಪತ್ತಿನ ಹೆಚ್ಚಳವಾಗುವ ಸಾಧ್ಯತೆ ಇದೆ. ಹಿರಿಯರನ್ನು ಗೌರವಿಸುವುದು ನಿಮ್ಮ ಪ್ರಗತಿಗೆ ಸಹಾಯ ಮಾಡುತ್ತದೆ.
ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.