ಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷ
ಹೊಸ ವರ್ಷದಲ್ಲಿ ನಮ್ಮ ರಾಶಿ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಬಹುತೇಕ ಎಲ್ಲರಿಗೂ ಇರುತ್ತದೆ. ಈ ವರ್ಷ ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರುತ್ತಿದೆ.
ಹೊಸ ವರ್ಷ ಆರಂಭದಲ್ಲಿಯೇ ಅಂದರೆ ಜನವರಿ 28, 2025 ರಂದು, ರಾಹು ಮೀನ ರಾಶಿಯಲ್ಲಿ ಶುಕ್ರನೊಂದಿಗೆ ಸಂಯೋಗವನ್ನು ರಚಿಸುತ್ತಾನೆ. ಇದು ಮೂರು ರಾಶಿಯವರ ಯಶಸ್ಸಿನ ಹಾದಿಯನ್ನು ತೆರೆಯುತ್ತದೆ. ಇವರ ಪಾಲಿಗೆ ಹೊಸ ವರ್ಷ ಅದೃಷ್ಟದ ಮೂಟೆಯನ್ನೇ ಹೊತ್ತು ತರುತ್ತಿದೆ.
ವೃಷಭ ರಾಶಿ :ಎಷ್ಟೇ ಸಾಲ ಇದ್ದರೂ ತೀರುವುದು. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಕಾಣುವಿರಿ. ವ್ಯಾಪಾರದಲ್ಲಿಯೂ ಲಾಭವಾಗುವುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು.
ಕಟಕ ರಾಶಿ : ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಜೀವನದ ದೊಡ್ಡ ಕನಸು ನನಸಾಗಬಹುದು.ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭ ಸಮಯ ಆರಂಭವಾಗಲಿದೆ. ಸಂತೋಷ ಮತ್ತು ಸಮೃದ್ಧಿಯ ಹೊಸ ಮಾರಗಳು ತೆರೆದುಕೊಳ್ಳುವುದು.
ವೃಶ್ಚಿಕ ರಾಶಿ : ವೃತ್ತಿಜೀವನದಲ್ಲಿ ಯಶಸ್ಸು ಕಾಣುವಿರಿ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ನಿಮ್ಮ ಜೀವನದ ದಿಕ್ಕೇ ಬದಲಾಗುವುದು. ಜೀವನದಲ್ಲಿ ಧನಾತ್ಮಕ ಬದಲಾವಣೆ ಇರುತ್ತದೆ.
ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE Kannada News ಅದನ್ನು ಖಚಿತಪಡಿಸುವುದಿಲ್ಲ.