TikTok ಅಭಿಮಾನಿಗಳಿಗೆ ಗುಡ್ ನ್ಯೂಸ್, ಚೈನೀಸ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ನೂತನ ಅಪ್ಡೇಟ್ ನಿಮಗಾಗಿ
ನವದೆಹಲಿ: ಚೀನೀ ಕಿರು ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ ಬ್ಯಾನ್ ಆಗಿ ನಾಲ್ಕು ತಿಂಗಳಾಗಿದೆ. ಏತನ್ಮಧ್ಯೆ ಅನೇಕ ದೇಸಿ ಕಿರು ವೀಡಿಯೊ ಅಪ್ಲಿಕೇಶನ್ಗಳನ್ನು ಪ್ರಾರಂಭಿಸಲಾಗಿದೆ. ಆದರೆ ಟಿಕ್‌ಟಾಕ್‌ನ ಅಭಿಮಾನಿಗಳು ಮತ್ತು ಬಳಕೆದಾರರು ಇನ್ನೂ ಹೊಸ ಅಪ್ಲಿಕೇಶನ್‌ಗಳಿಗೆ ವಿರಳವಾಗಿ ವಲಸೆ ಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಪಬ್ ಜೀಯಂತೆಯೇ ಟಿಕ್‌ಟಾಕ್ ಭಾರತದಲ್ಲಿ ಪುನರಾಗಮನ ಮಾಡಬಹುದು ಎಂಬ ವರದಿಗಳು ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಏನು ಎಂದು ತಿಳಿಯಲು ಮುಂದೆ ಓದಿ...
2019 ರಲ್ಲಿ ದೊರೆತ ಮಾಹಿತಿಯ ಪ್ರಕಾರ ಟಿಕ್‌ಟಾಕ್ (TikTok) ಭಾರತದಲ್ಲಿ 120 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಟಿಕ್‌ಟಾಕ್ 2019 ರಲ್ಲಿ ಉಚಿತ ಅಪ್ಲಿಕೇಶನ್‌ಗಳಿಂದ ಹೆಚ್ಚು ಡೌನ್‌ಲೋಡ್ ಮಾಡಲಾದ ಎರಡನೇ ಅಪ್ಲಿಕೇಶನ್ ಆಗಿದೆ.
ವಿಶೇಷವೆಂದರೆ ನೂರಾರು ಭಾರತೀಯ ಉದ್ಯೋಗಿಗಳು ಟಿಕ್‌ಟಾಕ್‌ನ ಮೂಲ ಕಂಪನಿ ಬೈಟೆಡೆನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಟಿಕ್‌ಟಾಕ್ ಮತ್ತು ಹೆಲೋ ಕಂಪನಿಗಳು ಒಟ್ಟಿಗೆ ಸುಮಾರು 2000 ಉದ್ಯೋಗಿಗಳನ್ನು ಹೊಂದಿವೆ.
ಚೀನಾದ ವಿಸ್ಮಯ! Tiktok ಮೇಲಿನ ನಿಷೇಧವನ್ನು ಹತ್ತೇ ದಿನದಲ್ಲಿ ಹಿಂಪಡೆದ ಪಾಕಿಸ್ತಾನ
ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಭಾರತದಲ್ಲಿ ಉದ್ಯೋಗಿಗಳಿಗೆ ಇಮೇಲ್ ಮಾಡಿದ್ದಾರೆ. ಭಾರತದಲ್ಲಿ ಮತ್ತೆ ಟಿಕ್‌ಟಾಕ್ ಮೇಲಿನ ನಿರ್ಬಂಧ ಹಿಂತೆಗೆಯುವ ಬಗ್ಗೆ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ಈ ಮೇಲ್‌ನಲ್ಲಿ ಆಶಿಸಲಾಗಿದೆ.
ಟೆಕ್ ಸೈಟ್ ಗಿಜ್ಬಾಟ್ (Gizbot) ಪ್ರಕಾರ, PUBG ನಂತರ ಈಗ ಟಿಕ್‌ಟಾಕ್ ಸಹ ಹಿಂತಿರುಗಬಹುದು. ಸರ್ಕಾರದೊಂದಿಗೆ ಮಾತನಾಡುವ ಮೂಲಕ ಈ ಆ್ಯಪ್ ಮೇಲಿನ ನಿಷೇಧವನ್ನು ತೆಗೆದುಹಾಕಬಹುದು ಎಂದು ಚೀನಾದ ಆ್ಯಪ್ ವಿಶ್ವಾಸ ವ್ಯಕ್ತಪಡಿಸಿದೆ.