Jupiter Transit 2023: 2024 ರವರೆಗೆ 3 ರಾಶಿಗಳಿಗೆ ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ ಗುರು, ಮಂಗಳನ ರಾಶಿಗೆ ದೇವಗುರು ಬೃಹಸ್ಪತಿಯ ಎಂಟ್ರಿ!
ಕರ್ಕ ರಾಶಿ- ಮಂಗಳನ ರಾಶಿಗೆ ಗುರುವಿನ ಪ್ರವೇಶ ಕರ್ಕ ರಾಶಿಯ ಜಾತಕದವರ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಗುರು ನಿಮ್ಮ ಗೋಚರ ಜಾತಕದ ಶಷ್ಟಮ ಮತ್ತು ನವಮ ಭಾವಕ್ಕೆ ಅಧಿಪತಿಯಾಗಿದ್ದು ಆತ ಪ್ರಸ್ತುತ ನಿಮ್ಮ ರಾಶಿಯ ದಶಮ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಇದರಿಂದ 2024ರವರೆಗೆ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಎಲ್ಲ ಇಚ್ಛೆ-ಆಕಾಂಕ್ಷೆಗಳು ನೆರವೇರಲಿವೆ.ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಧನಲಾಭ ಸಿಗಲಿದೆ. ಇನ್ನೊಂದೆಡೆ ಹಣಸಂಪಾದನೆಯ ಉತ್ತಮ ಅವಕಾಶಗಳು ಕೂಡ ನಿಮಗೆ ಒದಗಿಬರಲಿವೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಆದರೆ ನಿಮ್ಮ ಮೇಲೆ ಶನಿಯ ಸಾಡೇಸಾತಿ ನಡೆಯುತ್ತಿರುವ ಕಾರಣ ಸ್ವಲ್ಪ ಕಾಳಜಿವಹಿಸುವುದು ತುಂಬಾ ಮುಖ್ಯ.
ಸಿಂಹ ರಾಶಿ: ದೇವ ಗುರು ಬೃಹಸ್ಪತಿಯ ಈ ರಾಶಿ ಪರಿವರ್ತನೆ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ನವಮೇಶ ಭಾವದಲ್ಲಿ ಗುರುವಿನ ಈ ಗೋಚರ ನಡೆಯುತ್ತಿದೆ ಮತ್ತು ಮೇ 2024ರವರೆಗೆ ಬೃಹಸ್ಪತಿ ಅಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಆಸ್ತಿಪಾಸ್ತಿ ಖರೀದಿಗೆ ಈ ಅವಧಿ ಅತ್ಯಂತ ಅದ್ಭುತವಾಗಿರಲಿದೆ. ಯಾತ್ರೆಗಳಿಂದ ನಿಮಗೆ ಲಾಭ ಸಿಗಲಿದೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಬಯಸುವವರ ಆಸೆ ಈಡೇರಲಿದೆ. ಸಂತಾನ ಪಕ್ಷದ ವತಿಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಪ್ರೇಮ ಜೀವನದ ವಿಷಯದಲ್ಲಿ ಈ ಸಮಯ ಸಾಕಷ್ಟು ಉತ್ತಮವಾಗಿರಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಕಾಲ ಇದಾಗಿದೆ.
ತುಲಾ ರಾಶಿ: ದೇವಗುರು ಬೃಹಸ್ಪತಿಯ ಈ ಸ್ಥಾನಪಲ್ಲಟ ನಿಮ್ಮ ಪಾಲಿಗೆ ಅತ್ಯಂತ ಅದ್ಭುತ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ತೃತೀಯ ಹಾಗೂ ಷಷ್ಟಮ ಭಾವಕ್ಕೆ ಗುರು ಅಧಿಪತಿಯಾಗಿದ್ದು, ಪ್ರಸ್ತುತ ಆತ ನಿಮ್ಮ ರಾಶಿಯ ಸಪ್ತಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಪರಾಕ್ರಮದಲ್ಲಿ ಹೆಚ್ಚಳದ ಸಾಧ್ಯತೆ ಇದೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ನಿಮಗೆ ಯಶಸ್ಸು ಲಭಿಸಲಿದೆ. ಈ ಅವಧಿಯಲ್ಲಿ ನಿಮ್ಮ ಬಾಳಸಂಗಾತಿಯ ಉನ್ನತಿಯೂ ಕೂಡ ನೆರವೇರೇಲಿದೆ. ನೌಕರವರ್ಗದ ಜನರಿಗೆ ಪ್ರಮೋಷನ್-ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)