ನವೆಂಬರ್ 4ರವರೆಗೆ ಈ ರಾಶಿಯವರಿಗೆ ಕುಬೇರ ಯೋಗ ! ಸಂಪತ್ತಿನ ಆಗಮನಕ್ಕೆ ತಡೆಯೇ ಇರುವುದಿಲ್ಲ

Mon, 04 Sep 2023-10:58 am,

ಶನಿದೇವ ಪ್ರಸ್ತುತ ವಕ್ರ ಸ್ಥಿತಿಯಲ್ಲಿದ್ದಾರೆ. ನವೆಂಬರ್ 4 ರವರೆಗೆ ಶನಿ ಮಹಾತ್ಮನ ನಡೆ ಹೀಗೆಯೇ ಇರಲಿದೆ. ಶನಿಯ ವಕ್ರ ನಡೆ ಕೆಲವು ರಾಶಿಯವರ ಜೀವನದ ಮೇಲೆ ಅಪಾರ ಪರಿಣಾಮವನ್ನು ಬೀರುತ್ತದೆ. ಶನಿದೇವನ ಕೃಪೆಯಿಂದ ಇವರು ಜೀವನದಲ್ಲಿ ಹಣ, ಕೀರ್ತಿ ಮತ್ತು ಉತ್ತಮ ಪ್ರಗತಿಯನ್ನು ಕಾಣುವರು.   

ಸಿಂಹ ರಾಶಿ : ಸಿಂಹ ರಾಶಿಯವರು ಆರ್ಥಿಕವಾಗಿ ಮುನ್ನಡೆ ಸಾಧಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ವ್ಯವಹಾರದಲ್ಲಿಯೂ ಉತ್ತಮ ಯಶಸ್ಸು ಸಿಗುತ್ತದೆ.  ಪತಿ ಪತ್ನಿ ಸಂಬಂಧ ಮತ್ತಷ್ಟು ಗಾಢವಾಗುವುದು. ಮನೆ ಮನದಲ್ಲಿ ಸಂತೋಷ ಹೆಚ್ಚುತ್ತದೆ.  

ತುಲಾ ರಾಶಿ : ಶನಿದೆವನ ವಕ್ರ ನಡೆ ತುಲಾ ರಾಶಿಯವರಿಗೆ ತುಂಬಾ ಅನುಕೂಲಕರ. ಮಕ್ಕಳ ಮೂಲಕ ಈ ರಾಶಿಯವರಿಗೆ ಶುಭ ಸುದ್ದಿ ಸಿಗಲಿದೆ. ಕುಟುಂಬದಲ್ಲಿ ಸಂತೋಷವನ್ನು ವೃದ್ದಿಸುತ್ತದೆ. ಈ ಅವಧಿಯಲ್ಲಿ ವಾಹನ, ಆಸ್ತಿ ಖರೀದಿ ಯೋಗವಿರುತ್ತದೆ. 

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ಕೆಲಸದಲ್ಲಿ ಬಡ್ತಿ ಪಡೆಯಬಹುದು ಅಥವಾ ಕೆಲಸದ ಸ್ಥಳ ಬದಲಾವಣೆಯಾಗಬಹುದು. ಇದರಿಂದ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಮನಸ್ಸಿನ ಸಂತೋಷ ಹೆಚ್ಚಾಗುತ್ತದೆ. 

ಧನು ರಾಶಿ : ಕೆಲಸದ ಸ್ಥಳದಲ್ಲಿ ಯಶಸ್ಸು ಸಿಗಬಹುದು. ನಿಮ್ಮ ಶ್ರಮದ ಮೂಲಕ  ಪ್ರತಿಷ್ಠೆ ಹೆಚ್ಚುತ್ತದೆ. ಶನಿಯ ವಕ್ರ ನಡೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ  ಸಿಗುತ್ತದೆ. 

ಮಕರ ರಾಶಿ : ಕೆಲಸದಲ್ಲಿ ಯಶಸ್ಸಿ ಶಿಖರ ಏರುವುದು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಬಡ್ತಿ ಮೂಲಕ ವೇತನ ಹೆಚ್ಚಳಕ್ಕೆ ಅವಕಾಶಗಳನ್ನು ನೀಡುತ್ತದೆ. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link