ಅಕ್ಟೋಬರ್ ವರೆಗೆ ಈ ರಾಶಿಯವರ ಮೇಲೆ ಶನಿ ಕಟಾಕ್ಷ ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ಖಂಡಿತಾ
![ಮೇಷ ರಾಶಿ Aries](https://kannada.cdn.zeenews.com/kannada/sites/default/files/2023/03/20/292724-aries.gif?im=FitAndFill=(500,286))
ಮೇಷ ರಾಶಿ- ಶನಿಯ ರಾಶಿಯ ಸಂಕ್ರಮಣವು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಆರ್ಥಿಕ ಲಾಭ ಹೆಚ್ಚುತ್ತದೆ. ನೀವು ಅಂದು ಕೊಂಡ ಹಾಗೆ ಆದಾಯದಲ್ಲಿ ಹೆಚ್ಚಳವಾಗಲಿದೆ. ಶನಿಯ ಕೃಪೆಯಿಂದ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ಅದೃಷ್ಟ ಸದಾ ಬೆನ್ನ ಹಿಂದೆ ಇರಲಿದೆ.
![ಮಿಥುನ ರಾಶಿ Gemini](https://kannada.cdn.zeenews.com/kannada/sites/default/files/2023/03/20/292723-gemini.gif?im=FitAndFill=(500,286))
ಮಿಥುನ ರಾಶಿ - ಮಿಥುನ ರಾಶಿಯವರ ಕನಸು ಈಡೇರುವ ಕಾಲವಿದು. ಶನಿಯ ನಕ್ಷತ್ರ ಬದಲಾವಣೆಯಿಂದಾಗಿ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಕಾಣುವುದು ಸಾಧ್ಯವಾಗುತ್ತದೆ. ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಜಯ ಗಳಿಸುವಿರಿ.
![ಸಿಂಹ ರಾಶಿ Leo](https://kannada.cdn.zeenews.com/kannada/sites/default/files/2023/03/20/292722-leo.gif?im=FitAndFill=(500,286))
ಸಿಂಹ ರಾಶಿ- ಈ ರಾಶಿಯವರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಹೊಂದುವುದು ಸಾಧ್ಯವಾಗುತ್ತದೆ. ಬಹಳ ಸಮಯದಿಂದ ಕಾಯುತ್ತಿರುವ ಯಶಸ್ಸು ಇದೀಗ ಅವರಿಗೆ ಲಭಿಸಲಿದೆ. ಉದ್ಯೋಗ ಬದಲಾಯಿಸಬೇಕು ಎಂದು ಅಂದುಕೊಂಡವರಿಗೆ ಇದು ಒಳ್ಳೆಯ ಸಮಯ. ವ್ಯಾಪಾರ ಮತ್ತು ಆಸ್ತಿಯಲ್ಲಿಯೂ ಲಾಭ ಇರುತ್ತದೆ.
ತುಲಾ ರಾಶಿ- ಶತಭಿಷದಲ್ಲಿ ಶನಿ ಸಂಕ್ರಮಣ ತುಲಾ ರಾಶಿಯ ಜನರ ವೃತ್ತಿ ಜೀವನದಲ್ಲಿ ಪ್ರಗತಿಯ ಬಾಗಿಲು ತೆರೆದಿದೆ. ಹೊಸ ಕೆಲಸಕ್ಕೆ ಸೇರಲು ಒಳ್ಳೆಯ ಕಾಲ. ದೊಡ್ಡ ಮಟ್ಟದ ಧನಲಾಭವಾಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಜೀವನದಲ್ಲಿ ಸಂತೋಷ ಮಾತ್ರ ಇರುತ್ತದೆ.
ಧನು ರಾಶಿ- ಶನಿಯ ಸಂಕ್ರಮಣವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ನೀವು ಬಯಸಿದ ಕೆಲಸ ಈ ಬಾರಿ ಸಿಗಲಿದೆ. ಏನೇ ಕೆಲಸಕ್ಕ ಕೈ ಹಾಕಿದರೂ ಜಯ ಖಂಡಿತಾ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)