ಅಕ್ಟೋಬರ್ ವರೆಗೆ ಈ ಐದು ರಾಶಿಯವರು ಕೈ ಇಟ್ಟಲೆಲ್ಲಾ ಹಣ ! ಎದುರಾಗುವ ಎಲ್ಲಾ ಅಡೆತಡೆ ನಿವಾರಿಸುತ್ತಾನೆ ಶನಿ ಮಹಾತ್ಮ

Tue, 28 Mar 2023-11:26 am,

ಶನಿಯು ಮಾರ್ಚ್  14 ರಂದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇನ್ನು ಮುಂದಿನ ಅಕ್ಟೋಬರ್ 15 ರವರೆಗೆ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ.  ಅಕ್ಟೋಬರ್ 15ಕ್ಕೆ ಮತ್ತೆ ಧನಿಷ್ಟ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಹೀಗೆ ನಕ್ಷತ್ರ ಬದಲಿಸಿರುವ ಶನಿ ಮಹಾತ್ಮ ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಸಲಿದ್ದಾರೆ. 

ನಕ್ಷತ್ರ ಬದಲಾಯಿಸಿರುವ ಶನಿ ಮಹಾತ್ಮ ಮೇಷ ರಾಶಿಯವರ ಜೀವನದಲ್ಲಿ ಭಾರೀ ಶುಭ ಫಲ ತರಲಿದ್ದಾನೆ. ಈ ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಯಲಿದೆ. ಇವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಶನಿ ಮಹಾತ್ಮನ ಆಶೀರ್ವಾದ ಇರಲಿದೆ. ಏನೇ ಕೆಲಸ ಮಾಡಿದರೂ ಜಯ ಕಟ್ಟಿಟ್ಟ ಬುತ್ತಿ. ಎರಡು ಯೋಚನೆ ಇಲ್ಲದೆ ಹೊಸ ಕೆಲಸವನ್ನು ಆರಂಭಿಸಬಹುದು. ಆರ್ಥಿಕವಾಗಿ ಲಾಭವಾಗಲಿದೆ. 

ಶನಿ ಸಂಕ್ರಮಣದಿಂದ ಮುಂದಿನ ಏಳು ತಿಂಗಳವರೆಗೆ ವೃಷಭ ರಾಶಿಯವರಿಗೆ ಅದೃಷ್ಟ ಬೆಳಗಲಿದೆ. ಈ ರಾಶಿಯವರ ಜಾತಕದಲ್ಲಿ ರಾಜಯೋಗ ಕೂಡಿ ಬರಲಿದೆ. ಈ ರಾಶಿಯವರು ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ಬಡ್ತಿ ಸಿಕ್ಕಿ  ವೇತನ ಹೆಚ್ಚಳವಾಗಲಿದೆ.   

ಮಿಥುನ ರಾಶಿಯವರ ಜೀವನದಲ್ಲಿ ಸುರ್ವಣ ಯುಗ ಆರಂಭವಾಗಿದೆ. ಈ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಇದು ಅತ್ಯಂತ ಮಂಗಳಕರ ಅವಧಿಯಾಗಿರಲಿದೆ. ಇಲ್ಲಿಯವರೆಗೆ ನಿರೀಕ್ಷಿಸುತ್ತಿದ್ದ ಯಶಸ್ಸು ಈ ಏಳು ತಿಂಗಳಲ್ಲಿ ನಿಮಗೆ ಒಲಿದು ಬರಲಿದೆ. 

ಈ ರಾಶಿಯವರಿಗೆ ಶನಿ ಸಂಚಾರವು ಅತ್ಯಂತ ಫಲಪ್ರದವಾಗಿದೆ.  ಸಾಲದಿಂದ ಮುಕ್ತಿ ಸಿಗಲಿದೆ. ಅಪಾರ ಸಂಪತ್ತಿನ ಒಡೆಯರಾಗುವ ಸಮಯ ಇದು. ದುಡಿಯುವ ವರ್ಗಕ್ಕೂ ಇದು ಉತ್ತಮ ಸಮಯ. ಹೆಚ್ಚು ಉದ್ಯೋಗಾವಕಾಶಗಳು ದೊರೆಯಲಿವೆ. 

ಶನಿಯ ನಕ್ಷತ್ರ ಪರಿವರ್ತನೆ ಮಕರ ರಾಶಿಯವರಿಗೂ ಅದೃಷ್ಟ. ಕುಟುಂಬದಲ್ಲಿ ಸಂತೋಷ ಅಲೆ ಏಳುತ್ತದೆ. ಈ ರಾಶಿಯವರ ವೇತನ ಹೆಚ್ಚಾಗಲಿದೆ. ಮಕರ ರಾಶಿಯವರ ಬಡ್ತಿ ಮತ್ತು ವೇತನ ಹೆಚ್ಚಳವಾಗಲಿದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಅನುಮೋದಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link