Tips For Natural Glow: ನೈಸರ್ಗಿಕ ಕಾಂತಿಗಾಗಿ ತ್ವಚಾ ರಕ್ಷಣೆಯ ಪಂಚ ಸೂತ್ರಗಳು

Wed, 18 Aug 2021-6:04 pm,

1. ನೀರು ಕುಡಿದು ಮಲಗಿ - ಕೆಲವೊಮ್ಮೆ ಸಾಕಷ್ಟು ನಿದ್ರೆಯ ಬಳಿಕವೂ ಕೂಡ ಬೆಳಗ್ಗೆ ನಮ್ಮ  ಮುಖವು ದಣಿದಂತೆ ಮತ್ತು ನಿರ್ಜಲೀಕರಣಗೊಂಡಂತೆ ಕಾಣುತ್ತದೆ, ಹೀಗಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಮ್ಮ ಚರ್ಮದ ಮೇಲೆ ನೈಸರ್ಗಿಕ ಇರಬೇಕು ಎಂದು ನಾವು ಬಯಸುತ್ತಿದ್ದರೆ, ರಾತ್ರಿಯಲ್ಲಿ ಬಹಳ ಚಿಕ್ಕ ಟ್ರಿಕ್ ಅನ್ನು ಪ್ರಯತ್ನಿಸಬೇಕು. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು 1 ಗ್ಲಾಸ್ ನೀರು ಕುಡಿಯಿರಿ.

2. ರಾತ್ರಿಯ ಊಟದಲ್ಲಿ ಗಜ್ಜರಿ ಸೇವಿಸಿ - ರಾತ್ರಿ ಕ್ಯಾರೆಟ್ ಸಲಾಡ್ ತಿನ್ನಿರಿ. ಇದು ವಿಟಮಿನ್ ಕೆ, ಸಿ, ಇ, ಎ ಮತ್ತು ಬಿ ಅನ್ನು ಹೊಂದಿರುತ್ತದೆ. ಇದರ ಸಹಾಯದಿಂದ ಚರ್ಮದ ಮೇಲೆ ಬರುವ ಸತ್ತ ಕೋಶಗಳನ್ನು ತೆಗೆದುಹಾಕಬಹುದು.  

3. ಮುಖವನ್ನು ತೊಳೆದು ಮಲಗಿ - ನೀವು ಹಗಲಿನಲ್ಲಿ ಮುಖಕ್ಕೆ ಮೇಕ್ಅಪ್ ಮಾಡಿದರೂ ಅಥವಾ ಯಾವುದೇ ಕ್ರೀಮ್ ಹಚ್ಚಿದ್ದರೂ, ರಾತ್ರಿ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಂಡು ಮಲಗಿ.

4. ರಾತ್ರಿ ಮುಖಕ್ಕೆ ಹಸಿ ಹಾಲನ್ನು ಹಚ್ಚಿ ಮಲಗಿ  - ಹಾಲು ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ, ಲ್ಯಾಕ್ಟಿಕ್ ಆಸಿಡ್ ಚರ್ಮವನ್ನು ಆರೋಗ್ಯಕರವಾಗಿಸುತ್ತದೆ, ಹೀಗಾಗಿ ರಾತ್ರಿಯಲ್ಲಿ ಮುಖಕ್ಕೆ ಹಸಿ ಹಾಲನ್ನು ಲೇಪಿಸಿ ಮಲಗಿಕೊಳ್ಳಿ. ಒಂದು ವೇಳೆ ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ,  ಹಸಿ ಹಾಲಿಗೆ ಕೆಲವು ಹನಿ ಟೀ ಟ್ರೀ ಎಣ್ಣೆಯ ಹನಿಗಳನ್ನು ಬೆರೆಸಿ.

5. ಟೂಥ್ ಬ್ರಷ್ ನಿಂದ ತುಟಿಯ ಮೇಲಿನ ಒಣ ಚರ್ಮ ತೆಗೆದುಹಾಕಿ - ಹೊಳೆಯುವ ಚರ್ಮದ ಜೊತೆಗೆ, ತುಟಿಗಳ ಸೌಂದರ್ಯ ಕೂಡ ಬಹಳ ಮುಖ್ಯ, ಆದ್ದರಿಂದ ನೀವು ತುಟಿಗಳ ಒಣಗಿದ ಚರ್ಮವನ್ನು ಮೃದುವಾದ ಟೂತ್ ಬ್ರಶ್ ನಿಂದ ತೆಗೆದು ಮಲಗಬಹುದು, ಇದರಿಂದ ನಿಮ್ಮ ತುಟಿಗಳು ಮೃದು ಮತ್ತು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link