ತುಳಸಿ ಗಿಡಕ್ಕೆ ಅರ್ಪಿಸುವ ನೀರಿಗೆ ಈ ವಸ್ತು ಬೆರೆಸಿದರೆ ಹರಿದು ಬರುವುದು ಸಿರಿ ಸಂಪತ್ತು! ಲಕ್ಷ್ಮೀ ಕೃಪೆಯಿಂದ ಒಲಿಯುವುದು ಅಷ್ಟೈಶ್ವರ್ಯ
ಪ್ರತಿ ಹಿಂದೂಗಳ ಮನೆಯಲ್ಲಿ ತುಳಸಿ ಕಟ್ಟೆ ಇದ್ದೇ ಇರುತ್ತದೆ. ತುಳಸಿ ಕಟ್ಟೆ ಇಲ್ಲದೆ ಹೋದರೆ ಯಾವುದೇ ಮಣ್ಣಿನ ಕುಂಡದಲ್ಲಿಯಾದರೂ ತುಳಸಿಯನ್ನು ನೆಟ್ಟು ಪೂಜಿಸಲಾಗುತ್ತದೆ. ಯಾಕೆಂದರೆ ಮನೆ ಮುಂದೆ ತುಳಸಿ ಇರಲೇ ಬೇಕು ಎನ್ನುವುದು ಹಿಂದೂ ಸಂಪ್ರದಾಯದ ಪ್ರಕಾರ ಇರುವ ನಂಬಿಕೆ.
ತುಳಸಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಸಸ್ಯ. ಅದು ಕೇವಲ ಒಂದು ಸಸ್ಯ ಅನ್ನುವುದಕ್ಕಿಂತ ಸಾಕ್ಷಾತ್ ಲಕ್ಷ್ಮೀಯ ಪ್ರತಿರೂಪ. ಇದೇ ಕಾರಣಕ್ಕೆ ದಿನಕ್ಕೆರಡು ಬಾರಿ ತುಳಸಿಗೆ ದೀಪ ಬೆಳಗುವುದು ಕಡ್ಡಾಯ.
ಮುಂಜಾನೆ ಎದ್ದು ಸ್ನಾನ ಮಾಡಿ ತುಳಸಿಗೆ ನೀರು ಅರ್ಪಿಸುವುದು ಕೂಡಾ ಬಹಳ ಮುಖ್ಯ ಕ್ರಮ. ಇದರಿಂದ ನಮ್ಮ ದಿನ ಮಂಗಳಕರವಾಗಿರುತ್ತದೆ, ಎದುರಾಗಬಹುದಾದ ಸಮಸ್ಯೆಗಳು ಬದುಗೆ ಸರಿಯುತ್ತದೆ ಎಂದು ಹೇಳಲಾಗುತ್ತದೆ.
ತುಳಸಿಗೆ ನೀರನ್ನು ಅರ್ಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಬೆಟ್ಟದಂತೆ ಎದುರು ನಿಲ್ಲುವ ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುತ್ತವೆಯಂತೆ
ಇಲ್ಲಿ ಮಹಿಳೆಯರು ಗಮನಿಸಬೇಕಾದ ಒಂದು ಅಂಶವಿದೆ. ಮುಂಜಾನೆ ತುಳಸಿಗೆ ನೀರು ಅರ್ಪಿಸುವುದು ಸರಿ. ಆದರೆ, ಅದು ಬರೀ ನೀರಾಗಿರಬಾರದು. ಆ ನೀರಿಗೆ ಸಲ್ಪ ಅರಶಿನ, ಶ್ರೀಗಂಧ, ಕುಂಕು
ಅಲ್ಲದೆ ತುಳಸಿಗೆ ನೀರು ಅರ್ಪಿಸುವಾಗ ತಾಮ್ರದ ಲೋಟ ಅಥವಾ ಚೊಂಬನ್ನು ಮಾತ್ರ ಬಳಸಬೇಕು. ಹೀಗೆ ಮಾಡಿದರೆ ಆರ್ಥಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ ಸರಾಗವಾಗಿ ಕರಗುತ್ತಾ ಹೋಗುವುದು.
ತುಳಸಿಗೆ ನಿತ್ಯ ನೀರು ಅರ್ಪಿಸುವುದು, ದೀಪ ಧೂಪ ಬೆಳಗುವುದರಿಂದ ಲಕ್ಷ್ಮೀ ಮಾತ್ರವಲ್ಲ, ವಿಷ್ಣು ಕೂಡಾ ಪ್ರಸನ್ನನಾಗುತ್ತಾನೆ. ಇವರಿಬ್ಬರ ಆಶೀರ್ವಾದದಿಂದ ಮನೆ ಅಭಿವೃದ್ದಿಯಾಗುತ್ತಲೇ ಹೋಗುವುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ದೃಢೀಕರಿಸುವುದಿಲ್ಲ.