ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿಂದರೆ ಸಾಕು, ದಿಂಬು ಸೋಕುತ್ತಿದ್ದ ಹಾಗೆ ಜಾರುವಿರಿ ಗಾಢ ನಿದ್ದೆಗೆ ! ನಿದ್ರಾಹೀನತೆಗೆ ಇದೇ ಮದ್ದು
ಕೆಲವರಿಗೆ ರಾತ್ರಿ ಹೊತ್ತು ನಿದ್ದೆ ಬರುವುದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಎಣ್ಣೆ ಮಾಡಿದರೂ ಅತ್ತಿಂದಿತ್ತ ಹೊರಳಾ ಡುತ್ತಾರೆ ವಿನಃ ನಿದ್ದೆ ಕಣ್ಣು ಹತ್ತುವುದಿಲ್ಲ.
ಕೆಲವರಿಗೆ ನಿದ್ದೆ ಮಾತ್ರೆ ಇಲ್ಲ ಎಂದರೆ ನಿದ್ದೆಯೇ ಬರುವುದಿಲ್ಲ. ನಿದ್ದೆ ಮಾತ್ರೆ ಸೇವಿಸಿದ ತಕ್ಷಣ ನಿದ್ದೆ ಬರಬಹುದು. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಖಂಡಿತಾ ಒಳ್ಳೆಯದಲ್ಲ.
ನಿದ್ರಾಹೀನತೆಗೆ ಪರಿಹಾರ ಎಂದರೆ ಈ ತರಕಾರಿ. ಅಡುಗೆಯಲ್ಲಿ ನಿತ್ಯ ಬಳಸುವ ಈ ತರಕಾರಿಯ ಒಂದು ಪೀಸ್ ತಿಂದರೆ ಸಾಕು ಗಾಢ ನಿದ್ದೆಗೆ ಜಾರುವಿರಿ. ಒಂದು ಒಂದು ರೀತಿ ನೈಸರ್ಗಿಕ ನಿದ್ದೆ ಮಾತ್ರೆಯಂತೆ ಕೆಲಸ ಮಾಡುತ್ತದೆ.
ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಸಲ್ಫಾಕ್ಸೈಡ್‌ಗಳು ಕ್ರಿಯಾಶೀಲವಾಗುತ್ತವೆ. ಇದು ನರ ಕೋಶಗಳಿಗೆ ವಿಶ್ರಾಂತಿ ನೀಡುತ್ತದೆ.ಹಾಗಾಗಿ ಉತ್ತಮ ನಿದ್ದೆ ಬರುತ್ತದೆ.
ಈರುಳ್ಳಿ ತಿಂದರೆ ಮೆದುಳು ನಿರಾಳವಾಗುತ್ತದೆ.ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಅತಿಯಾದ ಯೋಚನೆಗಳು ಬಾರದಂತೆ ತಡೆಯುತ್ತದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮೂಲಕ,ಚೆನ್ನಾಗಿ ನಿದ್ದೆಗೆ ಜಾರಲು ಸಹಾಯ ಮಾಡುತ್ತದೆ.
ಆಕ್ಸಿಟಾಕ್ಸಿನ್‌ಗಳಂತಹ ಹಾರ್ಮೋನುಗಳ ಮಟ್ಟವನ್ನು ಸಮತೋಲನಗೊಳಿಸಬಹುದು. ಇದು ಹಾರ್ಮೋನ್ ಅಸಮತೋಲನದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.