ಈ ಸಲಹೆಗಳನ್ನು ಪಾಲಿಸಿದರೆ ನಿಮಗೆ ಹೃದಯಾಘಾತ ಎಂದಿಗೂ ಬರುವುದಿಲ್ಲ..! ನೀವು ಸಂಪೂರ್ಣವಾಗಿ ಸುರಕ್ಷಿತ

Thu, 10 Oct 2024-10:19 pm,

ಪ್ರಸ್ತುತ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಈ ಸಮಸ್ಯೆ ಯುವ ಪೀಳಿಗೆಯನ್ನು ಕಾಡುತ್ತಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅನೇಕರಿಗೆ ಹಠಾತ್ ಹೃದಯಾಘಾತವಾಗುತ್ತಿದೆ.. ಈ ಕುರಿತು ಕೆಲವೊಂದಿಷ್ಟು ವಿಡಿಯೋಗಳು ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..   

ಹೃದ್ರೋಗ ತಜ್ಞರು ಹೇಳುವಂತೆ, ಕಡಿಮೆ ಸಕ್ಕರೆ ಮತ್ತು ಉಪ್ಪನ್ನು ಸೇವಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.. ಅಲ್ಲದೆ, ವಾರಕ್ಕೊಮ್ಮೆ ಉಪವಾಸ ಮಾಡುವುದು ಅಥವಾ ದಿನಕ್ಕೆ ಒಮ್ಮೆ ತಿನ್ನುವುದು ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ..  

ಉತ್ತಮ ನಿದ್ದೆ ಹೃದ್ರೋಗವನ್ನು ತಡೆಯುತ್ತದೆ. ನಿದ್ರಾಹೀನತೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಹೃದಯವನ್ನು ಸುರಕ್ಷಿತವಾಗಿಡಲು 6 ರಿಂದ 8 ಗಂಟೆಗಳ ನಿದ್ದೆ ಮತ್ತು ನಿಯಮಿತ ವ್ಯಾಯಾಮ ಬಹಳ ಮುಖ್ಯ.  

ಹೃದಯಾಘಾತದ ಅಪಾಯಗಳನ್ನು ಕಡಿಮೆ ಮಾಡಲು ಜೀವನಶೈಲಿಯ ಬದಲಾವಣೆಗಳು ಅತ್ಯಗತ್ಯ. ಊಟ, ನಿದ್ದೆ ಮತ್ತು ಏಳುವ ಸಮಯದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ.  

ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಫಾಸ್ಟ್ ಫುಡ್ ಮಕ್ಕಳು ಮತ್ತು ವಯಸ್ಕರಿಗೆ ಹಾನಿಕಾರಕವಾಗಿದೆ. ಹೃದಯಾಘಾತದಂತಹ ಗಂಭೀರ ತೊಡಕುಗಳನ್ನು ತಡೆಗಟ್ಟಲು ಸಮತೋಲಿತ, ನಿಯಮಿತ ಆಹಾರವನ್ನು ಸೇವಿಸುವುದು ಮುಖ್ಯ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link