ಕಿರಿಕಿರಿ ಫೋನ್ ಕರೆಗಳಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯ ಇಲ್ಲಿದೆ
ಅನೇಕ ಬಾರಿ, ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಮತ್ತೆ ಮತ್ತೆ ಫೋನ್ ಮಾಡಿ ಕಿರಿ ಕಿರಿ ಉಂಟು ಮಾಡುತ್ತಾರೆ. ಈ ಸಂದರ್ಭದಲ್ಲಿ ಫೋನ್ ರೆಸಿವ್ ಮಾಡಿದರೆ ಒಂದು ರೀತಿಯ ಸಮಸ್ಯೆ, ಫೋನ್ ಕಟ್ ಮಾಡಿದರೆ ಮತ್ತೊಂದು ತೀರಿಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಅನೇಕ ಬಾರಿ ಮೀಟಿಂಗ್ ನಲ್ಲಿರುವಾಗ ಅಥವಾ ಬಹಳ ಇಂಟರೆಸ್ಟಿಂಗ್ ಫಿಲಂ ನೋಡುತ್ತಿದ್ದಾಗ ಫೋನ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಆದಾಗ್ಯೂ, ಅಂತಹ ಸಮಸ್ಯೆ ಎದುರಾದಾಗ, ಹೆಚ್ಚಿನ ಜನರು ತಮ್ಮ ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇಡುತ್ತಾರೆ. ಆದರೆ ಈಗ ಫೋನ್ ಅನ್ನು ಫ್ಲೈಟ್ ಮೋಡ್ ಗೆ ಹಾಕುವ ವಿಚಾರ ಎಲ್ಲರಿಗೂ ಗೊತ್ತಿರುತ್ತದೆ. ಹಾಗಾಗಿ ಈಗ ಫ್ಲೈಟ್ ಮೋಡ್ ಇದಕ್ಕೆ ಪರಿಹಾರವಲ್ಲ.
ನಿಮಗೆ ಫೋನ್ ರಿಸೀವ್ ಮಾಡಲು ಇಷ್ಟವಿಲ್ಲದಿದ್ದರೆ, ಮೊಬೈಲ್ ನಲ್ಲಿ ಕಾಲ್ ಫಾರ್ವರ್ಡ್ ಮಾಡುವ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ನಿಮ್ಮ ಕರೆಗಳನ್ನು ಫಾರ್ವರ್ಡ್ ಮಾಡಿದ ನಂತರ, ಸೇವೆಯಲ್ಲಿಲ್ಲದ ಸಂಖ್ಯೆಯನ್ನು ಆಯ್ಕೆ ಮಾಡಿ. ಈಗ ಎಲ್ಲಾ ಅನಗತ್ಯ ಕರೆಗಳನ್ನು ಸೇವೆಯಲ್ಲಿಲ್ಲದ ಸಂಖ್ಯೆಗೆ ರವಾನಿಸಲಾಗುತ್ತದೆ. ಈ ರೀತಿಯಾಗಿ ನೀವು ಅನಗತ್ಯ ಕರೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.