ಕರೋನಾ ಎರಡನೇ ಅಲೆಯಿಂದ ಬಚಾವಾಗಲು ಏನು ತಿನ್ನಬೇಕು ಏನು ತಿನ್ನಬಾರದು? ಏನು ಹೇಳುತ್ತೆ WHO

Tue, 27 Apr 2021-5:47 pm,

ಉಪ್ಪು ಇಲ್ಲದ ಆಹಾರ ಸೇವಿಸುವುದು ಸಾಧ್ಯವಿಲ್ಲ. ಆದರೆ ಅಧಿಕ ಪ್ರಮಾಣದಲ್ಲಿ ಉಪ್ಪು ಸೇವನೆ ಕೂಡಾ ನಿಮ್ಮನ್ನು ರೋಗಿಗಳನ್ನಾಗಿ ಮಾಡುತ್ತದೆ, ಆದ್ದರಿಂದ ನೀವು ಪ್ರತಿದಿನ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸದಿರುವುದು ಬಹಳ ಮುಖ್ಯ. ಇದಲ್ಲದೆ, ಹೆಚ್ಚು ಸಿಹಿ ತಿನ್ನುವುದು ಸಹ ಅನೇಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ, ಸಕ್ಕರೆ ಪಾನೀಯಗಳು, ತಂಪು ಪಾನೀಯಗಳು ಇತ್ಯಾದಿಗಳಲ್ಲದೆ ಸಿಹಿ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ.  

ಪ್ರಸ್ತುತ ಹೆಚ್ಚು ನೀರು ಕುಡಿಯಬೇಕು ಮತ್ತು ಹೆಚ್ಚು ದ್ರವ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಇದನ್ನು ಮಾಡುವುದರಿಂದ, ರಕ್ತವು ದೇಹದಲ್ಲಿರುವ ಪೋಷಕಾಂಶಗಳನ್ನು ಪ್ರತಿಯೊಂದು ಅಂಗಕ್ಕೂ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಅಲ್ಲದೆ, ದೇಹದಲ್ಲಿ ಸಂಗ್ರಹವಾಗಿರುವ ಟಾಕ್ಸಿನ್ ಅನ್ನು ಹೊರ ಹಾಕಲು ಇದು ಸಹಾಯ ಮಾಡುತ್ತದೆ. ಇದಲ್ಲದೆ ಕುಡಿಯುವ ನೀರಿನಿಂದ ದೇಹದ ಉಷ್ಣತೆಯೂ ನಿಯಂತ್ರಣದಲ್ಲಿರುತ್ತದೆ.

ಆಪಲ್, ಬಾಳೆಹಣ್ಣು, ಪೇರಳೆಹಣ್ಣು, ಸ್ಟ್ರಾಬೆರಿ, ಮುಸಂಬಿ, ಅನಾನಸ್, ಪಪ್ಪಾಯಿ, ಕಿತ್ತಳೆ  ಈ ಹಣ್ಣುಗಳನ್ನು ನೀವು ಪ್ರತಿದಿನ ತಿನ್ನಬೇಕು. ಇದಲ್ಲದೆ, ಹಸಿರು ಕ್ಯಾಪ್ಸಿಕಂ, ಬೆಳ್ಳುಳ್ಳಿ, ಶುಂಠಿ, ನಿಂಬೆ, ಕೊತ್ತಂಬರಿ, ಹಸಿರು ಮೆಣಸಿನಕಾಯಿ ಮುಂತಾದ ತರಕಾರಿಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ. ದ್ವಿದಳ ಧಾನ್ಯಗಳನ್ನು ತಿನ್ನುವುದು ಕೂಡಾ ಸಹಕಾರಿ.   

ಗೋಧಿ ಹಿಟ್ಟು, ಓಟ್ಸ್, ಜೋಳದ ಹಿಟ್ಟು, ರಾಗಿ ಹಿಟ್ಟು, ಬ್ರೌನ್ ರೈಸ್ ಮುಂತಾದ ಧಾನ್ಯಗಳನ್ನು ಸಹ ದೈನಂದಿನ ಆಹಾರದ ಭಾಗವಾಗಿಸಿ. ಅಲ್ಲದೆ, ಬಾದಾಮಿ, ತೆಂಗಿನಕಾಯಿ ಮತ್ತು ಪಿಸ್ತಾವನ್ನು ಪ್ರತಿದಿನ ಸೇವಿಸಿ.

ನೀವು ಮಾಂಸಾಹಾರಿಗಳಾಗಿದ್ದರೆ, ವಾರಕ್ಕೆ ಒಂದು ಅಥವಾ ಎರಡು ಬಾರಿ ರೆಡ್ ಮಿಟ್ ಸೇವಿಸಬಹುದು. ಕೋಳಿ, ಕೋಳಿ ಮೊಟ್ಟೆಯನ್ನು ಕೂಡಾ, ವಾರಕ್ಕೆ 2 ರಿಂದ 3 ಬಾರಿ ತಿನ್ನಬಹುದು. ಮಾಂಸಾಹಾರಿ ಆಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ.

1. ತಿನ್ನುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಅವುಗಳನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ಬಿಡಬಹುದು. 2. ಬೇಯಿಸಿದ ಆಹಾರ ಮತ್ತು ಹಸಿ ಆಹಾರವನ್ನು ಪ್ರತ್ಯೇಕವಾಗಿ ಇರಿಸಿ. ಹೀಗೆ ಮಾಡುವುದರಿಂದ ಹಸಿ ಪದಾರ್ಥಗಳಲ್ಲಿರುವ ರೋಗಾಣು ಬೇಯಿಸಿದ ಆಹಾರವನ್ನು ತಲುಪುವುದಿಲ್ಲ. 3. ಬೇಯಿಸಿದ ಮತ್ತು ಹಸಿ ಆಹಾರಕ್ಕಾಗಿ ಬೇರೆ ಬೇರೆ ಪಾತ್ರೆಗಳನ್ನು ಬಳಸಿ.  4. ತರಕಾರಿಗಳನ್ನು ವರ್ ಕುಕ್ ಮಾಡಬೇಡಿ. ಓವರ್ ಕುಕ್ ಮಾಡಿದರೆ ಅವುಗಳಲ್ಲಿರುವ  ಮಿನರಲ್ ಗಳು ನಷ್ಟವಾಗುತ್ತವೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link