ಪಾದಗಳಿಂದ ಹೊರ ಬರುವ ದುರ್ನಾತ ತಡೆಯಲು ಇಲ್ಲಿದೆ ಮನೆ ಮದ್ದು

Tue, 29 Jun 2021-1:42 pm,

ಪಾದಗಳ ವಾಸನೆಗೆ ಮುಖ್ಯ ಕಾರಣವೆಂದರೆ ಪಾದಗಳಲ್ಲಿ ಬರುವ ಬೆವರು ಸುಲಭವಾಗಿ ಒಣಗುವುದಿಲ್ಲ. ಈ ಬೆವರಿನೊಂದಿಗೆ ಬ್ಯಾಕ್ಟೀರಿಯಾ ಸಂಪರ್ಕಕ್ಕೆ ಬಂದಾಗ, ಪಾದಗಳಿಂದ ವಾಸನೆ ಬರಲು ಆರಂಭವಾಗುತ್ತದೆ. ಇನ್ನು ಸಾಕ್ಸ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದಲು ಈ ಸಮಸ್ಯೆ ಎದುರಾಗುತ್ತದೆ.  ಇದಕ್ಕೂ ಬ್ಯಾಕ್ಟೀರಿಯಾ ಕಾರಣ.   

ಬಿಳಿ ವಿನೆಗರ್ ಅತ್ಯುತ್ತಮ ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಪಾದಗಳಿಂದ ಬರುವ ವಾಸನೆಯನ್ನು ತೆಗೆದುಹಾಕಲು ಇದನ್ನು ಬಳಸಬಹುದು. 2-3 ಚೊಂಬು ನೀರಿನಲ್ಲಿ ಎರಡು ಚಮಚ ಬಿಳಿ ವಿನೆಗರ್ ಮಿಶ್ರಣ ಮಾಡಿ. ನಂತರ ಈ ನೀರನ್ನು ಬಕೆಟ್ ಅಥವಾ ಟಬ್‌ನಲ್ಲಿ ಹಾಕಿ ನಿಮ್ಮ ಪಾದಗಳನ್ನು ಅದರಲ್ಲಿ ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಮುಳುಗಿಸಿಟ್ಟರೆ ಸಮಸ್ಯೆ ಪರಿಹಾರವಾದಂತೆಯೇ.

ಆಂಟಿ-ಸೆಪ್ಟಿಕ್ ಗುಣಲಕ್ಷಣಗಳು ಸ್ಫಟಿಕದಲ್ಲಿ ಕಂಡುಬರುತ್ತವೆ.  ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪಾದಗಳ ವಾಸನೆಯನ್ನು ತೆಗೆದುಹಾಕಲು ಸ್ಫಟಿಕವನ್ನು ಬಳಸಬಹುದು. ಇದಕ್ಕಾಗಿ, ಒಂದು ಚಮಚ ಸ್ಪಟಿಕದ ಪುಡಿಯನ್ನು ಅರ್ಧ ಬಕೆಟ್ ನೀರಿನಲ್ಲಿ ಕರಗಿಸಿ. ನಂತರ ನಿಮ್ಮ ಪಾದಗಳನ್ನು ಈ ನೀರಿನಲ್ಲಿ ಇಪ್ಪತ್ತು ನಿಮಿಷಗಳ ಕಾಲ ಮುಳುಗಿಸಿ. ಇದು ಪಾದಗಳಲ್ಲಿನ ವಾಸನೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ.

ಅಡಿಗೆ ಸೋಡಾವನ್ನು ಪಾದಗಳಿಂದ ಹೊರ ಬರುವ ವಾಸನೆಯನ್ನು ತೆಗೆದುಹಾಕಲು ಬಳಸಬಹುದು. ಇದಕ್ಕಾಗಿ, ಒಂದು ಚಮಚ ಅಡಿಗೆ ಸೋಡಾವನ್ನು ಅರ್ಧ ಟಬ್ ನೀರಿನಲ್ಲಿ ಹಾಕಿ ಕರಗಿಸಿ. ಈಗ ಹದಿನೈದು ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಈ ನೀರಿನಲ್ಲಿ ಅದ್ದಿ. ಇದು ಬೆವರಿನ ಪಿಹೆಚ್ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link