Aadhaar News: ನಿಮ್ಮ ಹತ್ತಿರದ ಆಧಾರ್ ಸೆಂಟರ್ ಯಾವುದೆಂದು ತಿಳಿಯಲು ಈ ಸರಳ ವಿಧಾನ ಅನುಸರಿಸಿ

Sun, 06 Jun 2021-4:12 pm,

1. ಮೊದಲಿಗೆ ಯುಐಡಿಎಐಯ (UIDAI) ಅಧಿಕೃತ ವೆಬ್‌ಸೈಟ್‌  https://uidai.gov.in/. ಲಾಗಿನ್ ಮಾಡಿ 2.  ಇದರ ನಂತರ, My Aadhaar ಗೆ ಹೋಗಿ,  Get Aadhaar  ಮೂಲಕ Locate an Enrollment Center ಮೇಲೆ ಕ್ಲಿಕ್ ಮಾಡಿ 3. ಇಲ್ಲಿ ಇಂದು ವಿಂಡೋ ತೆರೆಯುತ್ತದೆ. ಅದರಲ್ಲಿ ನೀವು ರಾಜ್ಯ, ಪಿನ್ ಕೋಡ್ ಮತ್ತು ಸರ್ಚ್ ಬಾಕ್ಸ್ ನ ಾಪ್ಶನ್ ಇರುತ್ತದೆ. 4. ಇಲ್ಲಿ ಮೂರು ವಿಧಾನಗಳಲ್ಲಿ ಆಧಾರ್ ಕೇಂದ್ರವನ್ನು ಸರ್ಚ್ ಮಾಡಬಹುದು.  5. ರಾಜ್ಯದ ಮೇಲೆ ಕ್ಲಿಕ್ ಮಾಡಿದರೆ, ಮುಂದಿನ ಪುಟದಲ್ಲಿ ರಾಜ್ಯ, ಜಿಲ್ಲೆ, ಗ್ರಾಮದ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾವನ್ನು ಹಾಕಿ,  Locate a Centre ಮೇಲೆ ಕ್ಲಿಕ್ ಮಾಡಿ.  6. ಇಲ್ಲಿ Show Only permanent centresನ  ಚೆಕ್ ಬಾಕ್ಸ್ ಕಾಣಿಸುತ್ತದೆ. ಇಲ್ಲಿ ಸರ್ಚ್ ಮಾಡಿದರೆ, ಶಾಶ್ವತ ಕೇಂದ್ರಗಳ ಪಟ್ಟಿ ಸಿಗುತ್ತದೆ.   

ನೀವು ಹತ್ತಿರದ ಆಧಾರ್ ಕೇಂದ್ರದ ಸರ್ಚ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ್ದರೆ, ಮುಂದಿನ ಪುಟದಲ್ಲಿ, ಲೊಕ್ಯಾಲಿಟಿ ನೇಮ್, ನಗರ ಅಥವಾ ಜಿಲ್ಲೆಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಕ್ಯಾಪ್ಚಾವನ್ನು ನಮೂದಿಸಿ Locate a Centre ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕೂಡಾ ಶಾಶ್ವತ ಕೇಂದ್ರಗಳ ಮಾಹಿತಿಗಾಗಿ ಚೆಕ್ ಬಾಕ್ಸ್ ಅನ್ನು ಪರಿಶೀಲಿಸುವ ಆಯ್ಕೆ ಸಿಗುತ್ತದೆ. ಪೋಸ್ಟಲ್ ಪಿನ್ ಕೋಡ್ ಮೇಲೆ ಕ್ಲಿಕ್ ಮಾಡಿದ್ದರೆ, ಮುಂದಿನ ಪುಟದಲ್ಲಿ ಪಿನ್ ಕೋಡ್ ನಮೂದಿಸಿ ಮತ್ತು ಕ್ಯಾಪ್ಚಾ ಹಾಕಿ Locate a Centre  ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕೂಡಾ Show only permanent centres ನಲ್ಲಿ ಚೆಕ್ ಮಾಡಿದರೆ, ನಿಮ್ಮ ಹತ್ತಿರವಿರುವ ಶಾಶ್ವತ ಕೇಂದ್ರಗಳ ಸಂಪೂರ್ಣ  ಮಾಹಿತಿ ಸಿಗುತ್ತದೆ. 

ಈಗ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಇದೋಮದು ಕೇವಲ ಗುರುತು ಚೀಟಿ ಮಾತ್ರವಲ್ಲ, ಅನೇಕ ಸರ್ಕಾರಿ ಸೇವೆಗಳನ್ನು ಪಡೆಯಲು ಆಧಾರ್ ಅಗತ್ಯವಾಗಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಕೆಲವು ತಪ್ಪುಗಳು ಅಥವಾ ಅಪ್ ಡೇಟ್ ಮಾಡಿರದಿದ್ದರೆ, ನಿಮ್ಮ ಗುರುತನ್ನು ದೃಢೀಕರಿಸಲು ಇದನ್ನು ಬಳಸಲು ಸಾಧ್ಯವಾಗುವುದಿಲ್ಲ.  ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ಆಧಾರ್‌ನಲ್ಲಿ ನವೀಕರಿಸಬೇಕು. ಇದಲ್ಲದೆ, ಮಗುವಿನ ಬಯೋಮೆಟ್ರಿಕ್ ವಿವರಗಳನ್ನು 5 ವರ್ಷ ಮತ್ತು 15 ವರ್ಷ ವಯಸ್ಸಿನಲ್ಲಿ ಅಪ್ ಡೇಟ್ ಮಾಡಬೇಕು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link