Oil for Stronger Hair: ಕೂದಲು ಉದುರುವುದನ್ನು ತಡೆಯಲು ರಾಮಬಾಣ ಈ ಎಣ್ಣೆ! ಆದರೆ ಹೀಗೆ ಬಳಸಿ
ಕರಿಬೇವಿನ ಎಣ್ಣೆಯು ಕೂದಲು ಉದುರುವಿಕೆಯ ವಿರುದ್ಧ ಹೋರಾಡಿ ಬಲವಾದ ಮತ್ತು ಆರೋಗ್ಯಕರ ಕೇಶ ಬೆಳೆಯಲು ಸಹಾಯ ಮಾಡುತ್ತದೆ.. ಹಾಗಾದರೆ ಅದನ್ನು ಹೇಗೆ ಬಳಸಬೇಕೆಂಬುದನ್ನು ಇದೀಗ ತಿಳಿಯೋಣ..
ಒಂದು ಲೋಹದ ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿ.. ಸ್ವಲ್ಪ ಸಮಯದ ನಂತರ ಅದನ್ನು ತಣ್ಣಗಾಗಲು ಬಿಡಿ.
ತಣ್ಣಗಾದ ಎಣ್ಣೆಯನ್ನು ಸ್ವಚ್ಛವಾದ, ಗಾಳಿಯಾಡದ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ.. ಹೀಗೆ ಮಾಡುವುದರಿಂದ ಆ ಎಣ್ಣೆಯಲ್ಲಿರುವ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇನ್ನು ಈ ಕರಿಬೇವಿನ ಎಣ್ಣೆಯನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮಸಾಜ್ ಮಾಡಿ... ಒಂದು ಗಂಟೆ ಬಿಡಿನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ
ಉತ್ತಮ ಮತ್ತು ಶೀಘ್ರ ಫಲಿತಾಂಶಗಳಿಗಾಗಿ ಈ ಎಣ್ಣೆಯನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಿ... ಹೀಗೆ ಮಾಡಿದರೆ ಕೂದಲು ಉದುರುವಿಕೆ ಶೀಘ್ರವೇ ಕಡಿಮೆಯಾಗುತ್ತದೆ..