ರಾಜಧಾನಿಯ ಈ ಐದು ಪ್ರದೇಶಗಳಿಗೆ ಭೇಟಿ ನೀಡಲು ಆಗಸ್ಟ್ 15ರವರೆಗೆ ಹಣ ಪಾವತಿಸಬೇಕಿಲ್ಲ
ಹದಿನೆಂಟನೇ ಶತಮಾನದಲ್ಲಿ ನಿರ್ಮಿಸಲಾದ ಈ ಸಮಾಧಿಯು ದೆಹಲಿಯ ಭವ್ಯ ಸ್ಮಾರಕಗಳಲ್ಲಿ ಒಂದಾಗಿದೆ. ಇದು ಹುಮಾಯೂನ್ ಸಮಾಧಿಯಂತೆ ಕಾಣುತ್ತದೆ. ಸುತ್ತಲೂ ಹಚ್ಚ ಹಸಿರಿನ ಉದ್ಯಾನವನಗಳಿಂದ ಸುತ್ತುವರೆದಿರುವ ಈ ಸ್ಥಳದಲ್ಲಿ ಮುಕ್ತವಾಗಿ ತಿರುಗಾಡಬಹುದು.
ಜಂತರ್ ಮಂತರ್ ಖಗೋಳ ವೀಕ್ಷಣಾಲಯವಾಗಿದ್ದು, ಇದನ್ನು ರಾಜಾ ಜೈ ಸಿಂಗ್ ನಿರ್ಮಿಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಇದ್ದವರು ಇಲ್ಲಿ ವೀಕ್ಷಣಾಲಯಕ್ಕೆ ಭೇಟಿ ನೀಡಬಹುದು
ಯಮುನಾ ನದಿಯ ದಡದಲ್ಲಿರುವ ಹಳೆಯ ಕೋಟೆಯನ್ನು ಶೇರ್ ಶಾ ಸೂರಿ ತನ್ನ ಆಳ್ವಿಕೆಯಲ್ಲಿ ನಿರ್ಮಿಸಿದ್ದ. ವಾಸ್ತುಶಿಲ್ಪಡ ಬಗ್ಗೆ ಆಸಕ್ತಿ ಇದ್ದವರಾಗಿದ್ದರೆ, ಈ ಸ್ಥಳಕ್ಕೆ ಭೇಟಿ ನೀಡಬಹುದು.
ಸಲೀಂಘಡ್ ಕೋಟೆಯನ್ನು ಶೇರ್ ಷಾ ಸೂರಿಯ ಮಗ ಸಲೀಂ ನಿರ್ಮಿಸಿದ್ದ. ಇದು ಮೊಘಲರ ಕಾಲದ ವಿಶಿಷ್ಟ ಪರಂಪರೆಯಾಗಿದೆ.