Team India ವಿಶ್ವಕಪ್ ಗೆಲ್ಲಬೇಕೆಂದರೆ ಈ 5 ಕೆಲಸಗಳನ್ನು ಮಾಡಲೇಬೇಕು! ಟ್ರೋಫಿ ಖಚಿತ ಭಾರತದ್ದಾಗುತ್ತೆ…

Fri, 23 Jun 2023-11:14 am,

ಅಕ್ಟೋಬರ್‌-ನವೆಂಬರ್‌ ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್‌ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಟೀಂ ಇಂಡಿಯಾಗೆ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. 12 ವರ್ಷಗಳ ನಂತರ ತಂಡವನ್ನು ವಿಶ್ವ ಚಾಂಪಿಯನ್ ಮಾಡುವ ದೊಡ್ಡ ಜವಾಬ್ದಾರಿ ರೋಹಿತ್ ಮೇಲಿದೆ. ಅನುಭವಿ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ನೇತೃತ್ವದಲ್ಲಿ ತಂಡವು 2011 ರಲ್ಲಿ ವಿಶ್ವಕಪ್ ಗೆದ್ದಿತ್ತು.

ಭಾರತ ವಿಶ್ವಕಪ್ ಗೆಲ್ಲಬೇಕಾದರೆ, ಅಗ್ರ ಕ್ರಮಾಂಕವು ದೀರ್ಘಕಾಲ ಕ್ರೀಸ್‌ ನಲ್ಲಿ ಉಳಿಯಬೇಕಾಗುತ್ತದೆ. ಚೆನ್ನಾಗಿ ಆಡುವುದಲ್ಲದೆ, ರನ್ ಕೂಡ ಸೇರಿಸಬೇಕಾಗುತ್ತದೆ. ಒಂದು ವೇಳೆ ಟೀಂ ಇಂಡಿಯಾ ಶುಭಾರಂಭ ಮಾಡಿದರೆ ಗೆಲುವು ಸಾಧಿಸುವುದು ಖಂಡಿತ.

ಪ್ಲೇಯಿಂಗ್ -11 ಅನ್ನು ಆಯ್ಕೆ ಮಾಡುವುದು ದೊಡ್ಡ ವಿಷಯವಾಗಿದೆ. ಏಕೆಂದರೆ ಇದರಲ್ಲಿ ಸ್ವಲ್ಪ ಅಚಾತುರ್ಯವೂ ಅಭಿಮಾನಿಗಳನ್ನು ನಿರಾಶೆಗೊಳಿಸಬಹುದು. ಇತ್ತೀಚೆಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಫೈನಲ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ, ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (ಆರ್ ಅಶ್ವಿನ್) ಡಬ್ಲ್ಯುಟಿಸಿ ಫೈನಲ್‌ ನಲ್ಲಿ ಅವಕಾಶ ಪಡೆಯಲಿಲ್ಲ, ಇದರ ಬಗ್ಗೆ ಸಾಕಷ್ಟು ಟೀಕೆಗೆ ಕೇಳಿಬಂದಿದ್ದವು. ಏಕೆಂದರೆ ಅಶ್ವಿನ್ ಅವರು ಪ್ರಸ್ತುತ ಟೆಸ್ಟ್‌ನಲ್ಲಿ ನಂಬರ್ 1 ಬೌಲರ್ ಆಗಿದ್ದಾರೆ.

ಭಾರತ ತಂಡದ ಬೌಲಿಂಗ್ ಕೂಡ ಒಂದು ಅಂಚನ್ನು ಹೊಂದಿರಬೇಕು. ಪ್ರಸ್ತುತ, ಜಸ್ಪ್ರೀತ್ ಬುಮ್ರಾ ಅವರಂತಹ ಬಲಿಷ್ಠ ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ಅವರು ಫಿಟ್ ಆಗದಿದ್ದರೆ ಅವರ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೇಲೆ ಜವಾಬ್ದಾರಿ ಹೆಚ್ಚಲಿದೆ. ಇಬ್ಬರೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ನ (WTC Final-2023) ಭಾಗವಾಗಿದ್ದರು.

ಟೀಂ ಇಂಡಿಯಾದ ಆಲ್ ರೌಂಡರ್ ಗಳು ಕೂಡ ಎಚ್ಚರಿಕೆಯಿಂದ ಆಡಬೇಕಿದೆ. ಆಲ್‌ರೌಂಡರ್‌ಗಳು ಅದ್ಭುತ ಪ್ರದರ್ಶನ ನೀಡುವ ತಂಡಕ್ಕೆ ಟ್ರೋಫಿ ಸೇರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದಕ್ಕೂ ಮುನ್ನ ಯುವರಾಜ್ ಸಿಂಗ್ ಭಾರತಕ್ಕಾಗಿ ಈ ಕೆಲಸ ಮಾಡಿದ್ದಾರೆ. ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಬಲಿಷ್ಠ ಆಟಗಾರರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ.

ಟೀಮ್ ಇಂಡಿಯಾದ ಪ್ಲೇಯಿಂಗ್-11 ಆಯ್ಕೆಯಾದಾಗ, ರೋಹಿತ್ ದೊಡ್ಡ ಸಂದಿಗ್ಧತೆಗೆ ಒಳಗಾಗಬಹುದು. ಇದಕ್ಕೆ ಕಾರಣ, ಭಾರತವು ಒಬ್ಬರಿಂದ ಒಬ್ಬ ಉತ್ತಮ ಆಟಗಾರನನ್ನು ಹೊಂದಿದೆ, ಆದರೆ ಪ್ಲೇಯಿಂಗ್-11 ರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬುದೇ ರೋಹಿತ್ ಗೆ ಸಂಕಷ್ಟವನ್ನುಂಟು ಮಾಡುತ್ತದೆ. ಇನ್ನು ಈ ಸಂದರ್ಭದಲ್ಲಿ ಅಂಕಿಅಂಶಗಳಿಗೆ ಮಾತ್ರ ಒತ್ತು ನೀಡದೆ, ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಫಾರ್ಮ್‌ ನಲ್ಲಿರುವ ಆಟಗಾರನಿಗೆ ಅವಕಾಶ ಸಿಗಬೇಕು. ಹೀಗಾದಲ್ಲಿ ಟೀಂ ಇಂಡಿಯಾ ಟ್ರೋಫಿ ಎತ್ತಿಹಿಡಿಯಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link