Today Gold Rate: ಹಿಂದೆಂದೂ ಆಗಿರದಷ್ಟು ದರ ಏರಿಕೆ ಕಂಡ ಬಂಗಾರ! ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ?

Thu, 25 May 2023-8:13 am,

ಇಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 60,680 ರೂ ಆಗಿದ್ದರೆ, 22 ಕ್ಯಾರೆಟ್ (10 ಗ್ರಾಂ) ಬೆಲೆ 55,580 ರೂ. ಆಗಿದೆ.

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ ರೂ 61,510 ಆಗಿದ್ದರೆ, 22 ಕ್ಯಾರೆಟ್ (10 ಗ್ರಾಂ) ಬೆಲೆ ರೂ 56,400 ಆಗಿದೆ. ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ರೂ 61,360 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ರೂ 56,250, ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ ರೂ 52,285 ಇದ್ದರೆ, 22 ಕ್ಯಾರೆಟ್ (10 ಗ್ರಾಂ) ಬೆಲೆ ರೂ 47,927 ಇದೆ.

ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ 60,360 ಆದರೆ, 22 ಕ್ಯಾರೆಟ್ (10 ಗ್ರಾಂ) ಬೆಲೆ ರೂ 56,250 ಇದೆ. ಹೈದರಾಬಾದ್ ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ 61,360 ಇದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ ರೂ 56,250 ಆಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ 61,410 ಆದರೆ, 22 ಕ್ಯಾರೆಟ್ (10 ಗ್ರಾಂ) ದರ ರೂ 56,300 ಆಗಿದೆ.

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಇಂದು ಹಳದಿ ಲೋಹದ ಬೆಲೆ 260 ರೂ (ಪ್ರತಿ 10 ಗ್ರಾಂ) ಹೆಚ್ಚಾಗಿದೆ. 24 ಕ್ಯಾರೆಟ್ ಚಿನ್ನ (10 ಗ್ರಾಂ) 61,360 ರೂ. ಇದ್ದು, 22 ಕ್ಯಾರೆಟ್ ಚಿನ್ನ (10 ಗ್ರಾಂ) 56,250 ರೂ. ಆಗಿದೆ.

ಚಿನ್ನದ ಶುದ್ಧತೆಯನ್ನು ಗುರುತಿಸಲು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ ಮೂಲಕ ಹಾಲ್ ಮಾರ್ಕ್‌ಗಳನ್ನು ನೀಡಲಾಗುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿರುತ್ತದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ದರೆ ಕೆಲವರು 18 ಕ್ಯಾರೆಟ್‌ಗಳನ್ನು ಸಹ ಬಳಸುತ್ತಾರೆ. ಕ್ಯಾರೆಟ್ 24 ಅನ್ನು ಮೀರುವುದಿಲ್ಲ ಮತ್ತು ಹೆಚ್ಚಿನ ಕ್ಯಾರೆಟ್ ಚಿನ್ನವು ಶುದ್ಧವಾಗಿರುತ್ತದೆ.

22 ಮತ್ತು 24 ಕ್ಯಾರೆಟ್ ಚಿನ್ನದ ನಡುವಿನ ವ್ಯತ್ಯಾಸ: 24 ಕ್ಯಾರೆಟ್ ಚಿನ್ನವು 99.9 ಪ್ರತಿಶತ ಶುದ್ಧವಾಗಿದೆ ಮತ್ತು 22 ಕ್ಯಾರೆಟ್ ಸುಮಾರು 91 ಪ್ರತಿಶತ ಶುದ್ಧವಾಗಿದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಅತ್ಯಂತ ಪರಿಶುದ್ಧವಾಗಿದೆ. ಆದರೆ 24 ಕ್ಯಾರೆಟ್ ಚಿನ್ನದಿಂದ ಆಭರಣವನ್ನು ಮಾಡಲಾಗುವುದಿಲ್ಲ. ಅದಕ್ಕಾಗಿಯೇ ಹೆಚ್ಚಿನ ಅಂಗಡಿಯವರು 22 ಕ್ಯಾರೆಟ್‌ನಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link