ಪತ್ರಿಕೆಗಳಲ್ಲಿ ಇಂದಿನ ಹೈಲೈಟ್ಸ್
ಪ್ರಜಾವಾಣಿ * ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. 100% ನಾನು ಅಧಿಕಾರಕ್ಕೆ ಬಂದೇ ಬರುತ್ತೇನೆ- ಪ್ರಜಾವಾಣಿ ನಡೆಸಿದ 'ಕನಸಿನ ಕರ್ನಾಟಕ' ಸಂವಾದದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸದ ಮಾತು. * ನಿಲ್ಲದ ವಂಚನೆ ಪರ್ವ ಏಳು ಬ್ಯಾಂಕುಗಳಿಗೆ 3,695 ಕೋಟಿ ರೂ. ಬಾಕಿ ಉಳಿಸಿದ ವಿಕ್ರಮ್ ಕೊಠಾರಿ * ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೂತನವಾಗಿ ವಿನ್ಯಾಸಗೊಂಡ ಮೆಟ್ಟಿಲುಗಳು ಹಾಗೂ ಬಾಹುಬಿ ಜನರಲ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸೋಮವಾರ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸನ್ಮಾನಿಸಿದರು. * ಪಾಲಿಕೆ ಸದಸ್ಯರಿಂದ ಗಾಳಿಯಲ್ಲಿ ಗುಂಡು, ಮಸೀದಿ ಜಖಂ * ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ * 'ಕೆಎಸ್ಒಯು ಮಾನ್ಯತೆ: ಕೇಂದ್ರ ಹೊಣೆಯಲ್ಲ' * ಕನ್ನಡದಲ್ಲೇ ರೈಲ್ವೆ ನೇಮಕಾತಿ ಪರೀಕ್ಷೆ
ವಿಜಯಕರ್ನಾಟಕ * ಕಾಂಗ್ರೆಸ್ ಸರಕಾರ 10% ಕಮಿಷನ್ ಗಿಂತಲೂ ಹೆಚ್ಚು ಭ್ರಷ್ಟ ಸಿದ್ದರಾಮಯ್ಯ ತವರಲ್ಲೇ ಪ್ರಧಾನಿ ಮೋದಿ ವಾಕ್ ಪ್ರಹಾರ * ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ * ಪಿಯು ಕಾಲೇಜು ಬೇಸಿಗೆ ರಜೆ 15 ದಿನ ಕಡಿತ * ಗೂಗಲ್ ದುನಿಯಾದಲ್ಲಿ ರಾಜ್ಯ ಚುನಾವಣೆ ಹವಾ
ಕನ್ನಡಪ್ರಭ * ಹಾಸನ ಜಿಲ್ಲೆ ಶರವನಬೇಳಗೊಲದಲ್ಲಿ ನಡೆಯುತ್ತಿರುವ 12 ವರ್ಷಗಳ ವಿಸ್ಮಯವಾದ ಬಾಹುಬಲಿಯ ಮಹಾಮಸ್ತಕಾಭಿಷೇಕ ನಿಮಿತ್ತ ಕನ್ನಡಪ್ರಭ ಹೊರ ತಂಡ 'ಬೆಳಗೊಳದ ಬೆಳಕು' ವಿಶೇಷ ಸಂಚಿಕೆಯನ್ನು ಶ್ರೀಕ್ಷೇತ್ರದ ಪೀಠಾಧೀಶ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಸಂಚಿಕೆ ಪುಟಗಳನ್ನೂ ತಿರುವಿ ಹಾಕಿದ ಮೋದಿ ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. * ಶಾಸಕರ ರೌಡಿ ಪುತ್ರ ಕಡೆಗೂ ಶರಣಾಗತಿ; 40 ತಾಸು ತಲೆಮರೆಸಿಕೊಂಡಿದ್ದ ಮೊಹಮ್ಮದ್ ನಲಪಾಡ್ ಆಟೋದಲ್ಲಿ ಬಂದು ಪೊಲೀಸರಿಗೆ ಶರಣಾಗಿದ್ದಾರೆ. * ರಾಜ್ಯದಲ್ಲಿ ಬಿಜೆಪಿ ತ್ರಿಮೂರ್ತಿ ಸಂಚಾರ - ಮೈಸೂರಿನಲ್ಲಿ ಮೋದಿ ಮಹಾರ್ಯಾಲಿ ಸಂಚಲನ - ಕರಾವಳಿಯಲ್ಲಿ ಅಮಿತ್ ಷಾ ಮಿಂಚು: ಗೋಕರ್ಣ ಭೇಟಿ - ಮಲೆನಾಡಿನಲ್ಲಿ ಗಡ್ಕರಿ ಮೆಗಾ ಯೋಜನೆ * ಥಾಯ್ಲೆಂಡಲ್ಲಿ ಕಿಚ್ಚಗೆ ಬಾಕ್ಸಿಂಗ್ ತರಬೇತಿ! * ಮೋದಿ ಭಾಷಣಕ್ಕೆ ಸಿದ್ದು ಟ್ವೀಟ್ ಟಾಂಗ್ * ಮೋಡಿಗೆ ಅತಿಥ್ಯ ನೀಡಿ 3 ಲಕ್ಷ ಬಿಲ್ ಕಳುಹಿಸಿದ ಪಾಕ್!