ಈಕೆಯ ಗುಣ, ಸೌಂದರ್ಯ, ಕಷ್ಟಕ್ಕೆ ಮಿಡಿಯುವ ಮನಸ್ಸು ಎಲ್ಲಾ ಗರ್ಲ್ಸ್‌ಗೂ ಇದ್ದಿದ್ರೆ ಚನ್ನಾಗಿರ್ತಿತ್ತು..! ಯಾರಿಕೆ.. ಗೊತ್ತೆ..?
ಅನನ್ಯ ನಾಗಲ್ಲ ತೆಲಂಗಾಣ ಹುಡುಗಿ. ಖಮ್ಮಂ ಜಿಲ್ಲೆಯ ಸತ್ತುಪಲ್ಲಿಯವರು. ಬಿಟೆಕ್ ಓದಿರುವ ಈ ಮುದ್ದಾದ ಹುಡುಗಿ ಇತ್ತೀಚೆಗಷ್ಟೇ ‘ಪೊಟೆಲ್’ ಎಂಬ ಸಿನಿಮಾದಲ್ಲಿ ನಟಿಸಿದ್ದಳು.
ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಇನ್ಫೋಸಿಸ್‌ನಲ್ಲಿ ಕೆಲಸ ಮಾಡಿದ್ದ ಅನನ್ಯಾ.. ಆ ನಂತರ ಸಿನಿಮಾಗಳ ಮೇಲಿನ ಕ್ರೇಜ್‌ನಿಂದಾಗಿ ಕೆಲಸ ಬಿಟ್ಟಿದ್ದರು.
‘ಶಾದಿ’ ಕಿರುಚಿತ್ರಕ್ಕಾಗಿ ಅತ್ಯುತ್ತಮ ನಟಿಯಾಗಿ ‘ಸೈಮಾ’ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಚಿತ್ರದ ಮೂಲಕ ಮುನ್ನೆಲೆಗೆ ಬಂದರು.
ಅನನ್ಯಾ ಈ ಚಿತ್ರದಲ್ಲಿ ದಿವ್ಯಾ ನಾಯಕ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಿಂದಿ ರಿಮೇಕ್‌ಗೆ 'ಪಿಂಕ್' ಎಂದು ಹೆಸರಿಡಲಾಗಿದೆ. ಅನನ್ಯಾ ‘ತಂತ್ರ’ ಎಂಬ ಹಾರರ್ ಸಿನಿಮಾದಲ್ಲಿ ನಟಿಸಿ ಇಂಪ್ರೆಸ್ ಮಾಡಿದ್ದರು.
ಸಧ್ಯ ಅನನ್ಯ ನಾಗಲಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ನಟಿ ಹಳದಿ ಬಣ್ಣದ ಡ್ರೆಸ್ ಧರಿಸಿದ್ದು, ಉದ್ದವಾದ ಕಿವಿಯೋಲೆಗಳು ಹಾಕಿದ್ದಾಳೆ..
ಇನ್ನು ಇತ್ತೀಚಿಗೆ ನಟಿ ಚಳಿಯಿಂದ ನಡುಗುತ್ತಿದ್ದ ಬಡಜನರಿಗೆ ಬೆಡ್‌ಶೀಟ್ ವಿತರಣೆ ಮಾಡಿ ದೊಡ್ಡ ಮರೆದಿದ್ದಳು.. ಅಲ್ಲದೆ, ಆಂಧ್ರದಲ್ಲಿ ಉಂಟಾದ ಪ್ರವಾಹದ ವೇಳೆ ಸಹಾಯಹಸ್ತ ಚಾಚಿದ್ದಳು..
ಹಿಂದಿಯ ‘ಜಯೇಶ್ ಜೋರ್ದಾರ್ ಸ್ಟೋರಿ’ ಸಿನಿಮಾದಲ್ಲೂ ಅನನ್ಯಾ ನಟಿಸಿದ್ದರು. ಈ ಸಿನಿಮಾ 2022ರಲ್ಲಿ ಬಿಡುಗಡೆಯಾಗುತ್ತಿದೆ. ರಣವೀರ್ ಸಿಂಗ್ ನಾಯಕನಾಗಿ ನಟಿಸಿದ್ದಾರೆ.
ಈ ಬಾಲಿವುಡ್ ಸಿನಿಮಾದಲ್ಲಿ ಅನನ್ಯ ನಾಗಲ್ಲ ಜೊತೆಗೆ 'ಅರ್ಜುನ್ ರೆಡ್ಡಿ' ನಾಯಕಿ ಶಾಲಿನಿ ಪಾಂಡೆ ಕೂಡ ನಟಿಸಿದ್ದರು.. ಸಧ್ಯ ಈ ಸುಂದರಿ ತನ್ನ ಸೌಂದರ್ಯದಿಂದ ಎಲ್ಲರ ಮನ ಗೆಲ್ಲುತ್ತಿದ್ದಾಳೆ..