ಬಿಷ್ಣೋಯಿ ಜೊತೆ ನಿಶ್ಚಿತಾರ್ಥ ಬ್ರೇಕ್, ಅನುಷ್ಕಾ ಶರ್ಮಾ ಜೊತೆ ಸಿನಿರಂಗಕ್ಕೆ ಎಂಟ್ರಿ..! ಪಡ್ಡೆ ಹುಡುಗರ ಕ್ರಶ್ ಈಕೆ..
ಕೆಲವು ನಟಿಯರು ತಮ್ಮ ಹೆಸರು ಮತ್ತು ಪ್ರತಿಭೆಯಿಂದ ಗುರುತಿಸಲ್ಪಟ್ಟರೆ, ಇನ್ನೂ ಕೆಲವು ನಟಿಯರು ತಮ್ಮ ಅಪರೂಪದ ಸೌಂದರ್ಯದಿಂದ ಹೆಚ್ಚು ಜನಪ್ರಿಯರಾಗಿದ್ದಾರೆ.
ಈ ಮೇಲೆ ಫೋಟೋದಲ್ಲಿರುವ ಚೆಲುವೆಯೂ ಸಹ ಬ್ಯೂಟಿ ಜೊತೆ ನಟನೆಯ ಮೂಲಕ ತೆಲುಗು, ತಮಿಳು, ಹಿಂದಿ ಮತ್ತು ಪಂಜಾಬಿ ಚಿತ್ರಗಳಲ್ಲಿ ಹೆಸರು ಮಾಡಿದ್ದಾಳೆ.. ಅಂದಹಾಗೆ ನಾವು ಹೇಳುತ್ತಿರುವುದು ನಟಿ ಮೆಹ್ರೀನ್ ಪಿರ್ಜಾದಾ ಬಗ್ಗೆ..
ಮೆಹ್ರೀನ್ ಪಿರ್ಜಾದಾ ಬಾಲಿವುಡ್‌ನಲ್ಲಿ ಅಷ್ಟಾಗಿ ಕ್ರೇಜ್ ಹೊಂದಿಲ್ಲ.. ಆದರೆ ಟಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಈಕೆ ಒಬ್ಬರು..
ಮೇಹ್ರೀನ್ 1995 ರಲ್ಲಿ ಪಂಜಾಬ್‌ನಲ್ಲಿ ಕೃಷಿಕ ಮತ್ತು ರಿಯಾಲ್ಟರ್ ಗುರ್ಲಾಲ್ ಪಿರ್ಜಾದಾ ಅವರಿಗೆ ಜನಿಸಿದರು. ಇವರ ತಾಯಿ ಪರಮ್ಜಿತ್ ಕೌರ್ ಪಿರ್ಜಾದಾ. ಇವರಿಗೆ ಗುರ್ಫತೇಹ್ ಪಿರ್ಜಾದಾ ಎಂಬ ಸಹೋದರನಿದ್ದಾನೆ, ಅವರು ಮಾಡೇಲ್ ಮತ್ತು ನಟರೂ ಆಗಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್‌ಗೆ ಎಂಟ್ರಿ ಕೊಟ್ಟ ಮೆಹ್ರೀನ್ ಪಿರ್ಜಾದಾ ನಂತರ ಸಿನಿರಂಗಕ್ಕೆ ಪ್ರವೇಶ ಮಾಡಿದರು. 2016 ರಲ್ಲಿ ತೆಲುಗು ಚಿತ್ರ 'ಕೃಷ್ಣ ಗಾಡಿ ವೀರ ಪ್ರೇಮ ಗಾಧ' ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.
2017 ರಲ್ಲಿ 'ಫಿಲ್ಲೌರಿ' ಮತ್ತು 'ನೆಂಜಿಲ್ ತುನಿವಿರುಂದಾಲ್' ಚಿತ್ರಗಳೊಂದಿಗೆ ಹಿಂದಿ ಮತ್ತು ತಮಿಳು ಸಿನಿರಂಗಕ್ಕೆ ಮೊದಲ ಬಾರಿಗೆ ಪ್ರವೇಶ ಮಾಡಿದರು.
2023 ರಲ್ಲಿ, ಮೆಹ್ರೀನ್ ಪಿರ್ಜಾದಾ ತಾಹಿರ್ ರಾಜ್ ಭಾಸಿನ್ ಎದುರು 'ಸುಲ್ತಾನ್ ಆಫ್ ದೆಹಲಿ' ಮೂಲಕ OTT ಪಾದಾರ್ಪಣೆ ಮಾಡಿದರು.
2021 ರಲ್ಲಿ, ಮೆಹ್ರೀನ್ ಆದಂಪುರ್ ಶಾಸಕ ಭವ್ಯ ಬಿಷ್ಣೋಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ, ಕೆಲವು ತಿಂಗಳ ನಂತರ ನಿಶ್ಚಿತಾರ್ಥವನ್ನು ರದ್ದುಗೊಳಿಸಲು ನಿರ್ಧರಿಸಿದರು.