ಅಯ್ಯೋ.. ಛೀ.. ಅಪ್ಪ ಲಿಪ್‌ಕಿಸ್‌ ಮತ್ತೆ ಅದನ್ನ ಮಾಡ್ಬೇಡ ಅಂದಿದಾರೆ, ನಾನ್‌ ಮಾಡಲ್ಲಪ್ಪ..! ನಟಿ ಹೇಳಿಕೆ ವೈರಲ್‌..

Thu, 05 Dec 2024-6:58 pm,

ಚಿತ್ರರಂಗಕ್ಕೆ ಹೊಸ ನಾಯಕಿಯರು ಬರುತ್ತಲೇ ಇದ್ದಾರೆ.. ಇತ್ತೀಚೆಗೆ ಕನ್ನಡ ಹುಡುಗಿಯರು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಒಳ್ಳೆ ಆಫರ್‌ಗಳು ಬರುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಸಖತ್‌ ಕ್ರೇಜ್‌ ಹೊಂದಿದ್ದಾರೆ.  

ಕೆಲವು ಸುಂದರಿಯರು ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಇನ್ ಸ್ಟಾಗ್ರಾಂನಲ್ಲಿ ರೀಲ್ ಮಾಡುತ್ತಾ ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಇಂಪ್ರೆಸ್ ಮಾಡುತ್ತಿದ್ದಾರೆ.   

ಈ ಮೇಲಿನ ಫೋಟೋದಲ್ಲಿರುವ ಸುಂದರಿ ಸಹ ಸಾಮಾಜಿಕ ಮಾಧ್ಯಮದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಂಡು ಇದೀಗ ಸಾಲು ಸಾಲು ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾಳೆ.  

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮತ್ತು ಫೋಟೋಸ್‌ ಹಂಚಿಕೊಂಡು ನೆಟ್ಟಿಗರ ಗಮನಸೆಳೆದಿರುವ ಪ್ರೀತಿ ಪಗಡಲ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾಳೆ.  

ಅಮೆರಿಕದ ಉಚ್ಛಾರಣೆಯಲ್ಲಿ ತೆಲುಗು ಮಾತನಾಡುವ ಈ ಗ್ಲಾಮರ್‌ ಗೊಂಬೆ ಎಲ್ಲರ ಗಮನ ಸೆಳೆದಿದ್ದಾಳೆ. ಸಧ್ಯ ನಾಯಕಿಯಾಗಿ ʼಪತಂಗ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಪ್ರೀತಿ ಪಡಗಲ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಇಂಟಿಮೇಟ್ ಸೀನ್ ನಲ್ಲಿ ನಟಿಸುತ್ತೀರಾ? ಕೇಳಿದ ಪ್ರಶ್ನೆಗೆ.. ಅಪ್ಪ ಒಂದು ಕಂಡೀಷನ್ ಹಾಕಿದಾರೆ ಅಂತ ಹೇಳಿದ್ದಾರೆ.  

ನನ್ನ ಅಪ್ಪ, ನಾನು ಸಿನಿಮಾಗೆ ಹೋಗುತ್ತೇನೆ ಎಂದಾಗ ಲಿಪ್ ಲಾಕ್ ಸೀನ್ ಮಾಡಬಾರದು ಎಂದಿದ್ದರು. ಅವರು ನನಗಾಗಿ ಬಹಳಷ್ಟು ಮಾಡಿದ್ದಾರೆ. ನಾನು ಕೇಳಿದ್ದೆಲ್ಲ ಕೊಟ್ಟಿದ್ದಾರೆ. ಅವರು ಕೇಳಿದ ಈ ಒಂದು ಕೆಲಸ ಯಾಕೆ ಮಾಡಬಾರದು ಅಂತ ನಿರ್ಧರಿಸಿದೆ..  

ಹಾಗಾಗಿ ಲಿಪ್ ಲಾಕ್ ಸೀನ್ ಗಳಿಗೆ ನೋ ಹೇಳುತ್ತೇನೆ. ಗ್ಲಾಮರ್ ಶೋಗೆ ಯಾವುದೇ ಷರತ್ತು ಇಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಶಾರ್ಟ್ಸ್ ಡ್ರೆಸ್ ಬಳಕೆ ಸಾಮಾನ್ಯವಾಗಿದೆ ಎಂದು ಪ್ರೀತಿ ಹೇಳಿಕೊಂಡಿದ್ದಾರೆ.. ಸಧ್ಯ ನಟಿಯ ಈ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link