Samantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?

Tue, 12 Nov 2024-1:28 pm,

ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಕೂಡ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ.

ಸಮಂತಾ ರುತ್ ಪ್ರಭು ಪ್ರಸ್ತುತ ಸ್ಪೈ-ಥ್ರಿಲ್ಲರ್ ಸಿಟಾಡೆಲ್: ಹನ್ನಿ ಬನ್ನಿ ಮೂಲಕ ಸದ್ದು ಮಾಡುತ್ತಿದ್ದಾರೆ. ಇದರ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಅವರೊಂದಿಗೆ ವಿಚ್ಛೇದನದ 3 ವರ್ಷಗಳ ನಂತರ ತಾಯ್ತನದ  ಹಂಬಲವನ್ನು ವ್ಯಕ್ತಪಡಿಸಿದ್ದಾರೆ. 

ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ, ಸಮಂತಾ ರುತ್ ಪ್ರಭು ಅವರು, ʻʻತಾವು ತಾಯಿಯಾಗಲು ಬಯಸುತ್ತಾರೆʼʼ ಎಂದು ಹೇಳಿದ್ದಾರೆ. 

ʻʻನನಗೆ ತಾಯಿಯಾಗುವ ಆಸೆಯಿದೆ. ನಾನು ತಾಯ್ತನವನ್ನು ಅನುಭವಿಸಬೇಕು. ತುಂಬಾ ತಡವಾಗಿದೆ ಎಂದು ನಾನು ಭಾವಿಸುವುದಿಲ್ಲ. ನಾನು ಇನ್ನೂ ತಾಯಿಯಾಗುವ ಕನಸು ಹೊಂದಿದ್ದೇನೆ. ಖಂಡಿತವಾಗಿ, ನಾನು ತಾಯಿಯಾಗಲು ಇಷ್ಟಪಡುತ್ತೇನೆʼʼ ಎಂದಿದ್ದಾರೆ.

ʻʻನಾನು ಯಾವಾಗಲೂ ತಾಯಿಯಾಗಲು ಬಯಸುತ್ತೇನೆ. ಇದು ತುಂಬಾ ಸುಂದರವಾದ ಅನುಭವವಾಗಿದೆ. ನಾನು ಅದನ್ನು ಎದುರುನೋಡುತ್ತಿದ್ದೇನೆ. ಜನರು ಆಗಾಗ್ಗೆ ವಯಸ್ಸಿನ ಬಗ್ಗೆ ಚಿಂತಿಸುತ್ತಾರೆ, ಆದರೆ ವಯಸ್ಸಿಗೂ ತಾಯ್ತನಕ್ಕೂ ಸಂಬಂಧವಿಲ್ಲ ಎಂದು ನಾನು ಭಾವಿಸುತ್ತೇನೆʼʼ ಎಂದು ಸಮಂತಾ ಹೇಳಿದ್ದಾರೆ. 

ಸಿಟಾಡೆಲ್: ಹನ್ನಿ ಬನ್ನಿ ಸರಣಿಯಲ್ಲಿ ತನ್ನ ಮಗುವನ್ನು ರಕ್ಷಿಸಲು ಗೂಢಚಾರಿಕೆ ಮಾಡುವ ತಾಯಿಯಾಗಿ ಸಮಂತಾ ರುತ್ ಪ್ರಭು ನಟಸಿದ್ದಾರೆ. ಇದರಲ್ಲಿ ಬಾಲ ನಟಿಯಾಗಿರುವ ಪುಟ್ಟ ಹುಡುಗಿಯೇ ಸ್ವಂತ ಮಗಳೊಂದಿಗೆ ಭಾಸವಾಗುತ್ತಿದೆ ಎಂದು ಸಮಂತಾ ಹೇಳಿದ್ದಾರೆ. 

ಸಮಂತಾ ರುತ್ ಪ್ರಭು ಅವರ ಈ ಹೇಳಿಕೆ ಬಳಿಕ ಅವರ ಎರಡನೇ ಮದುವೆಗೆ ಸಿದ್ದತೆ ನಡೆಸಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಮಾತುಗಳ ಮೂಲಕ ಸಮಂತಾ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ ಎಂದು ಫ್ಯಾನ್ಸ್ ಭಾವಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link