ಕದ್ದು ಮುಚ್ಚಿ ರಾಮ್ ಚರಣ್ ಮನೆಯಲ್ಲಿದ್ದ ಗುಟ್ಟು ರಟ್ಟು ಮಾಡಿದ ಖ್ಯಾತ ನಟಿ !
ನಟಿ ಮಂಚು ಲಕ್ಷ್ಮಿ, ತೆಲುಗಿನಲ್ಲಿ ಅವಕಾಶಗಳು ಸಿಗದ ಕಾರಣ ಮುಂಬೈಗೆ ಬಂದು ಬಾಲಿವುಡ್‌ನಲ್ಲಿ ಅವಕಾಶಗಳ ಹುಡುಕಾಟದಲ್ಲಿದ್ದೀನಿ ಎಂದು ಹೇಳಿಕೊಂಡಿದ್ದಾರೆ.
ರಾಣಾ ದಗ್ಗುಬಾಟಿ ಹಾಗೂ ರಕುಲ್ ಪ್ರೀತ್‌ಸಿಂಗ್ ಮುಂಬೈಗೆ ಬಾ ಹಲವು ಬಾರಿ ಸಲಹೆ ನೀಡಿದ್ದರಂತೆ. ಇವರಿಬ್ಬರ ಮಾತಿನಂತೆ ಮುಂಬೈಗೆ ಹೋದೆ ಎಂದು ತಿಳಿಸಿದ್ದಾರೆ.
ಕೆಲ ದಿನ ರಕುಲ್ ಪ್ರೀತ್ ಸಿಂಗ್ ಮನೆಯಲ್ಲಿ ಮಂಚು ಲಕ್ಷ್ಮೀ ಇದ್ದರಂತೆ. ಬಳಿಕ ರಾಮ್‌ಚರಣ್ ಮುಂಬೈ ಫ್ಲಾಟ್‌ನಲ್ಲಿ ಯಾರಿಗೂ ಗೊತ್ತಿಲ್ಲದೇ ವಾಸವಾಗಿದ್ದೆ ಎಂದು ಮಂಚು ಲಕ್ಷ್ಮಿ ತಿಳಿಸಿದ್ದಾರೆ.
ಸದ್ಯ ಮಂಚು ಲಕ್ಷ್ಮಿ ಮುಂಬೈನಲ್ಲಿ ಫ್ಲಾಟ್ ಖರೀಸಿದ್ದಾರೆ. ಅದಕ್ಕೂ ಮುನ್ನ ಸೌತ್ ಸ್ಟಾರ್ ರಾಮ್‌ಚರಣ್ ಫ್ಲಾಟ್‌ನಲ್ಲಿದ್ದ ವಿಚಾರವನ್ನು ಮಂಚು ಲಕ್ಷ್ಮಿ ತಿಳಿಸಿದ್ದಾರೆ.
ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ತುಂಬಾ ರಸಹ್ಯವಾಗಿಟ್ಟಿದ್ದೆ. ಯಾರಿಗೂ ಹೇಳಬೇಡ ಎಂದು ರಾಮ್‌ಚರಣ್‌ಗೂ ತಿಳಿಸಿದ್ದೆ. ನೀನು ಆರಾಮಾಗಿ ಇರು, ನಾನು ಹೇಳಲ್ಲ ಎಂದು ರಾಮ್‌ಚರಣ್ ತಿಳಿಸಿದ್ದಾಗಿ ಮಂಚು ಲಕ್ಷ್ಮಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನೀವು ರಾಮ್ ಚರಣ್ ಮನೆಯಲ್ಲಿದ್ದಾಗ, ನಿಮಗೇನು ಕಮ್ಮಿ. ಸಿನಿಮಾಗಳು ಯಾಕೆ ಎಂದು ಮುಂಬೈನಲ್ಲಿ ಯಾರು ಕೆಲಸ ಕೊಡಲ್ಲ. ಹೀಗಾಗಿ ಈ ವಿಚಾರ ಮುಚ್ಚಿಟ್ಟಿದ್ದೆ ಎಂದು ಮಂಚು ಲಕ್ಷ್ಮಿ ಹೇಳಿಕೊಂಡಿದ್ದಾರೆ.
ಅಮೆರಿಕದಲ್ಲಿ ಓದಿ ಬೆಳೆದ ಮಂಚು ಲಕ್ಷ್ಮಿ 2011ರಲ್ಲಿ 'ಅನಗನ ಓ ಧೀರುಡು' ಚಿತ್ರದ ಮೂಲಕ ಸಿನಿ ಪಯಣ ಶುರು ಮಾಡಿದರು.