ಚಿರಂಜೀವಿ ಮದುವೆ ಇನ್ವಿಟೇಷನ್ ಹೇಗಿದೆ ಗೊತ್ತಾ? 40 ವರ್ಷಗಳ ಹಿಂದೆಯೇ ಈ ರೇಂಜ್‌ಗೆ ಮದುವೆ ಕಾರ್ಡ್ ಡಿಸೈನ್ ಮಾಡಿಸಿದ್ರಾ ಮೆಗಾಸ್ಟಾರ್‌ !

Mon, 07 Oct 2024-11:41 am,

"ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ" ಎಂದು ಕನ್ನಡದ ಕ್ರೇಜಿಸ್ಟಾರ್ ಜೊತೆ ಹೆಜ್ಜೆಹಾಕಿದ್ದ, ಶ್ರೀಮಂಜುನಾಥನಾಗಿ ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಮೆಗಾಸ್ಟಾರ್ ಚಿರಂಜೀವಿ ಟಾಲಿವುಡ್ ನ ಶ್ರೇಷ್ಠ ನಟರಲ್ಲಿ ಒಬ್ಬರು. 

ತೆಲುಗು ಚಿತ್ರರಂಗದ ಖ್ಯಾತಿಯನ್ನು ಹೆಚ್ಚಿಸಿದ ಅಗ್ರ ನಟರಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಒಬ್ಬರು. ಹೀಗಾಗಿಯೇ, ಇಂದಿಗೂ ಕೂಡ ಬಾಲಿವುಡ್ ನಲ್ಲಿಯೂ ಚಿರಂಜೀವಿ ಕ್ರೇಜ್ ಬಗ್ಗೆ ಮಾತನಾಡಲಾಗುತ್ತದೆ. 

ಟಾಲಿವುಡ್ ನಲ್ಲಿ ಎನ್‌ಟಿಆರ್ ಮತ್ತು ಎಎನ್‌ಎನ್‌ಆರ್ ಬಿಟ್ಟರೆ ಮುಂದಿನ ತಲೆಮಾರಿನ ಸ್ಟಾರ್ ನಟ ಎಂದರೆ ಚಿರಂಜೀವಿ.  ಒಂದು ಕಾಲದಲ್ಲಿ ಟಾಲಿವುಡ್ ಅನ್ನೇ ಆಳಿದ ನಟ ಈತ. 

ಕಳೆದ ನಾಲ್ಕು ದಶಕಗಳಿಂದ ತೆಲುಗು ಚಿತ್ರರಂಗವನ್ನು ಆಳಿ ಇಂದಿಗೂ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಚಿರಂಜೀವಿ ಮದುವೆ ಸಂಬಂಧಿತ ವಿಷಯವೊಂದು ಇತ್ತೀಚೆಗೆ ಸಖತ್ ಸದ್ದು ಮಾಡುತ್ತಿದೆ. 

ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಹೆಚ್ಚು ಗಮನ ಸೆಳೆಯುತ್ತಿರುತ್ತವೆ. ಈ ಮಧ್ಯೆ, ಚಿರಂಜೀವಿ ವೆಡ್ಡಿಂಗ್ ಕಾರ್ಡ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. 

ತಮ್ಮ ಬ್ಯುಸಿ ಶೆಡ್ಯೂಲ್‌ನಿಂದಾಗಿ ಮದುವೆಗಾಗಿ ಕೇವಲ 3 ದಿನವಷ್ಟೇ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದ ಚಿರಂಜೀವಿ ಟಾಲಿವುಡ್ ಶ್ರೇಷ್ಠ ನಟ ರಾಮಲಿಂಗಯ್ಯ ಅವರ ಪುತ್ರಿ ಸುರೇಖಾ ಅವರನ್ನು  1980ರ ಫೆಬ್ರವರಿ 20ರಂದು ವಿವಾಹವಾದರು. 

ಮೆಗಾಸ್ಟಾರ್ ದೊಡ್ಡ ಹೂವಿನ ಮಾಲೆ ಹಾಕಿಕೊಂಡು ನಿಂತಿರುವ ಫೋಟೋ ಸಮೇತ ಚಿರಂಜೀವಿ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡಲಾಗಿತ್ತು. 

ಸದ್ಯ ಮೆಗಾಸ್ಟಾರ್ ಚಿರಂಜೀವಿ ಅವರ ವೆಡ್ಡಿಂಗ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅಬ್ಬಾ... 40 ವರ್ಷಗಳ ಹಿಂದೆಯೇ ಈ ರೇಂಜ್‌ಗೆ ಮದುವೆ ಕಾರ್ಡ್ ಡಿಸೈನ್ ಮಾಡಿಸಿದ್ರಾ ಮೆಗಾಸ್ಟಾರ್ ಎಂಬ ಚರ್ಚೆ ಶುರುವಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link