30 ರಿಂದ 40 ವರ್ಷ ವಯಸ್ಸಾದರೂ ಇನ್ನೂ ಸಿಂಗಲ್ ಈ 10 ಸುಂದರಿಯರು..! ಲಿಸ್ಟ್ ಇಲ್ಲಿದೆ ನೋಡಿ
ಅನುಷ್ಕಾ ಶೆಟ್ಟಿ : ಅನುಷ್ಕಾ ಶೆಟ್ಟಿ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. 7 ನವೆಂಬರ್ 19981 ಹುಟ್ಟಿದ ಚೆಲುವೆಗೆ ಈಗ 42 ವರ್ಷ ವಯಸ್ಸು. ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ಅನುಷ್ಕಾ ಶೆಟ್ಟಿ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು. 2005 ರಲ್ಲಿ ನಾಗಾರ್ಜುನ ನಟನೆಯ ʼಸೂಪರ್ʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ʼವಿಕ್ರಮಾರ್ಕುಡುʼ ಚಿತ್ರದ ನಟನೆಯಿಂದ ಜನರ ಮನ ಗೆದ್ದರು. ಅಲ್ಲದೆ, ʼಅರುಂಧತಿʼ ಮೂಲಕ ಸೂಪರ್ ಸ್ಟಾರ್ ನಟಿಯಾಗಿ ಹೊರ ಹೊಮ್ಮಿದರು. ಇಷ್ಟೇಲ್ಲ ಹೆಸರು ಮಾಡಿರುವ ಸುಂದರಿ 42 ವರ್ಷ ವಯಸ್ಸಾದರೂ ಇನ್ನು ಸಿಂಗಲ್.
ತಾಪ್ಸಿ ಪನ್ನು : ಭಾರತೀಯ ರೂಪದರ್ಶಿ ಮತ್ತು ನಟಿ ತಾಪ್ಸಿ ಪನ್ನು. 1 ಆಗಸ್ಟ್ 1987 ರಲ್ಲಿ ಪಂಜಾಬಿ ಕುಟುಂಬದಲ್ಲಿ ನವದೆಹಲಿಯಲ್ಲಿ ಹುಟ್ಟಿ ಬೆಳೆದರು. ತಾಪ್ಸಿ 2010 ರಲ್ಲಿ ರಾಘವೇಂದ್ರ ರಾವ್ ಅವರ ತೆಲುಗು ಚಿತ್ರ ಜುಮ್ಮಂಡಿ ನಾದಂನಲ್ಲಿ ನಟಿಸಿದರು. ʼಆಡುಕಳಂʼ ಚಿತ್ರಕ್ಕಾಗಿ 58ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅವರು ಆರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ತಮಿಳು, ತೆಲುಗು ಮತ್ತು ಹಿಂದಿ ಮಾತನಾಡುವ ಜೊತೆಗೆ ಮಲಯಾಳಂ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಮಿಳು ಚಲನಚಿತ್ರ ಅರ್ರಂಬಮ್ (2013) ನಲ್ಲಿನ ಪಾತ್ರಕ್ಕಾಗಿ ಅವರು 2014 ರ ಎಡಿಸನ್ ಪ್ರಶಸ್ತಿ ಗೆದ್ದರು. ಇನ್ನೂ ಮದುವೆ ವಿಚಾರದಲ್ಲಿ ತುಂಬಾ ಹಿಂದಿದ್ದಾರೆ.
ಕ್ಯಾಥರೀನ್ ಟ್ರೆಸಾ : ಕ್ಯಾಥರೀನ್ ತ್ರೇಸಾ ದಕ್ಷಿಣ ಭಾರತ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. 2010 ರಲ್ಲಿ ಕನ್ನಡ ಶಂಕರ್ ಐಪಿಎಸ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಹೆಚ್ಚಾಗಿ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆನಂದ ವಿಕಟನ್ ಪ್ರಶಸ್ತಿಗಳು, SIIMA ಪ್ರಶಸ್ತಿಗಳು ಮತ್ತು ಎಡಿಸನ್ ಪ್ರಶಸ್ತಿಗಳು ಸೇರಿದಂತೆ ಅವರ ಅತ್ಯುತ್ತಮ ಅಭಿನಯಕ್ಕಾಗಿ ಅನೇಕ ಗೌರವಗಳನ್ನು ಗೆದ್ದಿದ್ದಾರೆ. ನಟನೆಯಿಂದ ಪ್ರೇಕ್ಷಕರ ಮನಗೆದ್ದಿರುವ ಚೆಲುವೆ ಇಂದಿಗೂ ಸಿಂಗಲ್.
ಸಮಂತಾ ರುತ್ ಪ್ರಭು : 28 ಏಪ್ರಿಲ್ 1987 ರಂದು ಜನಿಸಿದ ಸಮಂತಾಗೆ ಈಗ 36 ವರ್ಷ. ದಕ್ಷಿಣ ಭಾರತದ ಅಗ್ರಗಣ್ಯ ನಟಿ. ನಾಗ ಚೈತನ್ಯ ಅವರನ್ನು 2017 ರಲ್ಲಿ ಮದುವೆಯಾದರು ಅಲ್ಲದೆ ಕಾರಣಾಂತರದಿಂದಾಗಿ 2021 ಇಬ್ಬರು ಬೆರೆಯಾದರು. ಈಗ ಅವಿವಾಹಿತ ನಟಿಯರ ಸಾಲಿನಲ್ಲಿ ಈ ಸುಂದರಿ ಇದ್ದಾಳೆ.
ನಿತ್ಯಾ ಮೆನನ್ : ಮಲಯಾಳಂ ಸುಂದರಿ ನಿತ್ಯಾ ಮೆನನ್ ನಟಿ ಮತ್ತು ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. 8 ಏಪ್ರಿಲ್ 1988 ರಂದು ಜನಿಸಿದ ನಟಿಗೆ ಈಗ 35 ವರ್ಷ ವಯಸ್ಸಾಗಿದ್ದು, ಸಿಂಗಲ್ ಜೀವನ ಸಾಗಿಸುತ್ತಿದ್ದಾರೆ.
ಸಾಯಿ ಪಲ್ಲವಿ : 1992 9 ಮೇ ರಂದು ಜನಿಸಿದ ಈ ಸುಂದರಿಗೆ ಈಗ 31 ವರ್ಷ ವಯಸ್ಸು. ಸಾಯಿ ಪಲ್ಲವಿ ಭಾರತೀಯ ಹೆಸರಾಂತ ನಟಿಯಾಗಿದ್ದು, ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. 2015 ರಲ್ಲಿ ಮಲಯಾಳಂ ಚಿತ್ರ ʼಪ್ರೇಮಂʼ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟರು. ಲವ್ ಇಲ್ಲ ಡೇಟಿಂಗ್ ಅಂತೂ ಇಲ್ಲವೇ ಇಲ್ಲ. ಇಂದಿಗೂ ಈಕೆ ಸಿಂಗಲ್.
ತ್ರಿಶಾ ಕೃಷ್ಣನ್ : 40 ವರ್ಷ ವಯಸ್ಸಾಗಿರುವ ನಟಿ ತ್ರಿಶಾ ಅವರು ಭಾರತೀಯ ಸಿನಿರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ದಕ್ಷಿಣ ಭಾರತದಲ್ಲಿ ತ್ರಿಶಾಗೆ ಒಳ್ಳೆಯ ಹೆಸರಿದೆ. 1999 ರಲ್ಲಿ ತಮಿಳು ಚಲನಚಿತ್ರ ʼಜೋಡಿʼ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
ಶ್ರುತಿ ಹಾಸನ್ : ಶ್ರುತಿ ಹಾಸನ್‌ಗೆ 37 ವರ್ಷ ಮತ್ತು ಇನ್ನೂ ಮದುವೆಯಾಗಿಲ್ಲ ಆದರೆ ಸಂತಾನು ಹಜಾರಿಕಾ ಎಂಬ ವ್ಯಕ್ತಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶೃತಿ ಮತ್ತು ಸಂತನು ಮುಂಬೈನಲ್ಲಿ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಕೆ ಖ್ಯಾತ ನಟ ಕಮಲ್ ಹಾಸನ್ ಅವರ ಪುತ್ರಿ.
ರಾಕುಲ್ ಪ್ರೀತ್ ಸಿಂಗ್ : ತೆಲುಗು ಚಿತ್ರರಂಗದಲ್ಲಿ ಹೆಚ್ಚು ಹೆಸರನ್ನು ಮಾಡಿದ್ದಾರೆ. ಹಿಂದಿ, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಗಾಲ್ಫ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿರುವ ಪ್ರತಿಭಾವಂತ ಕ್ರೀಡಾಪಟು ಸಹ ಹೌದು.. ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಕುಲ್ 2009 ಕನ್ನಡ ಚಲನಚಿತ್ರ ʼಗಿಲ್ಲಿʼ ನಲ್ಲಿ ನಟನೆಯನ್ನು ಪ್ರಾರಂಭಿಸಿದರು. ಡೇಟಿಂಗ್ ಇಲ್ಲ, ಲವರ್ ಹೆಸರೂ ಸಹ ಗೊತ್ತಿಲ್ಲ. 33 ವರ್ಷ ವಯಸ್ಸಾದರೂ ಮದುವೆ ಮಾತಿಲ್ಲ.
ಇಲಿಯಾನಾ ಡಿ'ಕ್ರೂ : ಪೋರ್ಚುಗೀಸ್ ನಟಿ ಆದ್ರೆ ಹುಟ್ಟಿದ್ದು ಮಾತ್ರ ಭಾರತದಲ್ಲಿ. ತೆಲುಗು ಚಿತ್ರ ʼದೇವದಾಸುʼ ಅವರ ನಟನೆಯನ್ನು ಚೊಚ್ಚಲವಾಗಿ ಕಂಡಿತು. "ಕೇಡಿ" ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು. ತೆಲುಗು ಸಿನಿಮಾ ʼಪೋಕಿರಿʼ ಇಲಿಯಾನಾಗೆ ಬಿಗ್ ಹಿಟ್ ನೀಡಿತ್ತು. ಕಳೆದ ಕೆಲವು ವರ್ಷಗಳಿಂದ ಡೆಟಿಂಗ್‌ನಲ್ಲಿದ್ದರು. ಈಗ ತಾಯಾಗಿದ್ದಾರೆ. ಆದ್ರೆ ಮದುವೆ ಮಾತ್ರ ಆಗಿಲ್ಲ.